ದೇಶ

ಹಿಮಾಚಲ ಪ್ರದೇಶ ಚುನಾವಣೆ: ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ಸಿಎಂ ಜೈರಾಮ್ ಠಾಕೂರ್, ಮತ ಚಲಾವಣೆ

Sumana Upadhyaya

ಶಿಮ್ಲಾ: ಚಳಿಯ ವಾತಾವರಣ ನಡುವೆ ಪರ್ವತ ರಾಜ್ಯ ಹಿಮಾಚಲ ಪ್ರದೇಶ ವಿಧಾನಸಭೆಯ ಚುನಾವಣೆಗೆ ಮತದಾನ ಬೆಳಗ್ಗೆ 8 ಗಂಟೆಗೆ ಆರಂಭವಾಗಿದ್ದು ಬಿರುಸಿನಿಂದ ಸಾಗುತ್ತಿದೆ. ಮತದಾನ ಆರಂಭಕ್ಕೆ ಮುನ್ನ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರ ಪತ್ನಿ ಸುಧಾನ ಠಾಕೂರ್ ಮತ್ತು ಪುತ್ರಿಯರಾದ ಚಂದ್ರಿಕಾ ಠಾಕೂರ್ ಮತ್ತು ಪ್ರಿಯಾಂಕ ಠಾಕೂರ್ ಮಂಡಿಯಲ್ಲಿರುವ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. 

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಮುಖ್ಯಮಂತ್ರಿಗಳ ಪತ್ನಿ ಸುಧಾನ, ಜೈರಾಮ್ ಠಾಕೂರ್ ಅವರು ಸಿಎಂ ಆಗಿ ರಾಜ್ಯಾದ್ಯಂತ ಪ್ರಚಾರ ನಡೆಸಿದ್ದರಿಂದ ಇದು ನಮಗೆ ಬಹಳ ವಿಶೇಷ ದಿನವಾಗಿದೆ. ಅವರಿಗೆ ಯಶಸ್ಸಿಗೆ ನಾನು ದೇವರನ್ನು ಪ್ರಾರ್ಥಿಸುತ್ತೇನೆ, ನಮ್ಮ ರಾಜ್ಯವು ಹೊಸ ದಿಕ್ಕಿನತ್ತ ಒಯ್ಯುತ್ತಾರೆ ಎಂಬ ನಂಬಿಕೆ ನನಗಿದೆ ಎಂದಿದ್ದಾರೆ.

ಇಂದು ಸಂಭ್ರಮದ ವಾತಾವರಣವಿದೆ. ನಾವು ನಿರಾಳವಾಗಿದ್ದೇವೆ. ಮಂಡಿ ಕ್ಷೇತ್ರದ ಜನತೆ ಯಾವಾಗಲೂ (ಸಿಎಂ ಜೈರಾಮ್ ಠಾಕೂರ್ ಅವರ ಕ್ಷೇತ್ರ ) ಬೆಂಬಲಿಸಿದ್ದಾರೆ. ಆಗಿರುವ ಅಭಿವೃದ್ಧಿ ನೋಡಿದ ಜನ ಖಂಡಿತ ಬಿಜೆಪಿಗೆ ಮತ ಹಾಕುತ್ತಾರೆ ಎಂದು  ಸಿಎಂ ಜೈರಾಮ್ ಠಾಕೂರ್ ಪುತ್ರಿ ಚಂದ್ರಿಕಾ ಠಾಕೂರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಿಮಾಚಲ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥೆ ಪ್ರತಿಭಾ ಸಿಂಗ್ ಮತ್ತು ಅವರ ಪುತ್ರ ಮತ್ತು ಪಕ್ಷದ ಶಾಸಕ ವಿಕ್ರಮಾದಿತ್ಯ ಸಿಂಗ್ ಅವರು ಮತ ಹಾಕುವ ಮುನ್ನ ಶಿಮ್ಲಾದ ಶನಿ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದರು.ಹಿಮಾಚಲ ಪ್ರದೇಶದ ಎಲ್ಲಾ ಜನರು ತುಂಬಾ ಉತ್ಸುಕರಾಗಿದ್ದಾರೆ. ಎಲ್ಲರೂ ಇಂದು ಮತ ಚಲಾಯಿಸಿ ರಾಜ್ಯದಲ್ಲಿ ಹೊಸ ಸರ್ಕಾರ ರಚಿಸಲು ಸಹಕರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಪ್ರತಿಭಾ ಸಿಂಗ್ ಹೇಳಿದರು.

SCROLL FOR NEXT