ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ 
ದೇಶ

ಪರಿಸ್ಥಿತಿ ಸ್ಥಿರವಾಗಿದೆ... ಆದರೆ....: ಎಲ್ಎಸಿ ಬಗ್ಗೆ ಸೇನಾ ಮುಖ್ಯಸ್ಥರು ಹೇಳಿದ್ದೇನು ಅಂದರೆ....

ಈಶಾನ್ಯ ಲಡಾಖ್ ನಲ್ಲಿ ಪರಿಸ್ಥಿತಿ ಸ್ಥಿರವಾಗಿದೆ ಆದರೆ ಊಹಿಸಲಾಗದಂತಿದೆ (ಅನಿರೀಕ್ಷಿತ) ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೇ ಹೇಳಿದ್ದಾರೆ.

ನವದೆಹಲಿ: ಈಶಾನ್ಯ ಲಡಾಖ್ ನಲ್ಲಿ ಪರಿಸ್ಥಿತಿ ಸ್ಥಿರವಾಗಿದೆ ಆದರೆ ಊಹಿಸಲಾಗದಂತಿದೆ (ಅನಿರೀಕ್ಷಿತ) ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೇ ಹೇಳಿದ್ದಾರೆ.

ಚೀನಾದೊಂದಿಗೆ ಗಡಿ ವಿವಾದದ ಹಿನ್ನೆಲೆಯಲ್ಲಿ ಸೇನಾ ಮುಖ್ಯಸ್ಥರು ಈ ಹೇಳಿಕೆ ನೀಡಿದ್ದಾರೆ. ಚಾಣಾಕ್ಯ ಡೈಲಾಗ್ಸ್ ಎಂಬ ಥಿಂಕ್-ಟ್ಯಾಂಕ್ (ಚಿಂತಕರ ಚಾವಡಿ)ಯಲ್ಲಿ ಮಾತನಾಡಿರುವ ಜನರಲ್ ಪಾಂಡೇ, ಭಾರತ ಉಳಿದ ವಿಷಯಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಚೀನಾದೊಂದಿಗೆ ಮುಂದಿನ ಸುತ್ತಿನ ಉನ್ನತ ಮಟ್ಟದ ಸೇನಾ ಮಾತುಕತೆಯನ್ನು ಎದುರುನೋಡುತ್ತಿದೆ ಎಂದು ಹೇಳಿದ್ದಾರೆ.

17 ನೇ ಸುತ್ತಿನ ಮಾತುಕತೆಗಾಗಿ ನಾವು ದಿನಾಂಕವನ್ನು ಎದುರುನೋಡುತ್ತಿದ್ದೇವೆ ಎಂದು ಮನೋಜ್ ಪಾಂಡೇ ಹೇಳಿದ್ದಾರೆ. ಪಿಎಲ್ಎ ಪಡೆಗಳ ಪ್ರಮಾಣದ ಬಗ್ಗೆ ಮಾತನಾಡುವುದಾದರೆ, ಗಣನೀಯ ಪ್ರಮಾಣದ ಇಳಿಕೆಯೇನೂ ಆಗಿಲ್ಲ ಎಂದು ಈಶಾನ್ಯ ಲಡಾಖ್ ನಲ್ಲಿ ವಾಸ್ತವ ನಿಯಂತ್ರಣ ರೇಖೆಯ ಬಗ್ಗೆ ಪಾಂಡೇ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜಂತರ್ ಮಂತರ್ ಪ್ರತಿಭಟನೆ: ಮಹಿಳೆಯ ಮಾರ್ಫ್ ಮಾಡಿದ ಚಿತ್ರ ತೆಗೆದುಹಾಕಲು Metaಗೆ ಹೈಕೋರ್ಟ್ ಸೂಚನೆ; CJP ನಾಯಕರಿಗೆ ನೋಟಿಸ್

ರಿಷಬ್ ಶೆಟ್ಟಿಯಿಂದ ಹೊಸ ಸಿನಿಮಾ; ಯುವ ಪ್ರತಿಭೆಗಳಿಗೆ ಆಹ್ವಾನ: ಅರ್ಜಿ ಸಲ್ಲಿಸುವುದು ಹೇಗೆ? ಆಡಿಷನ್ ಯಾವಾಗ? ಇಲ್ಲಿದೆ ವಿವರ...

ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್​​ಗೆ ನೋಟಿಸ್; ಸಿಡಿದೆದ್ದ VHP

SIR: ವಿವಾದಗಳ ನಡುವೆಯೇ 3.27 ಕೋಟಿ ಹೊಸ ಮತದಾರರ ಸೇರ್ಪಡೆ!; ಚುನಾವಣಾ ಆಯೋಗ ಹೇಳಿದ್ದೇನು?

"ಸ್ಟಾಲಿನ್ ಸರ್, ಬಾಯಿ ಬಿಡಿ": ವೀರಮಣಿ ಸೆಕ್ಸ್ ಹಗರಣ ಉಲ್ಲೇಖಿಸಿ DMK ವಿರುದ್ಧ CM ವಿಜಯ್ ವಾಗ್ದಾಳಿ