ದೇಶ

ಎರಡು ಚಿನ್ನದಂಗಡಿ ಕಳ್ಳತನ ಪ್ರಕರಣ: ಕೇಂದ್ರ ಸಚಿವ ಪ್ರಮಾಣಿಕ್ ವಿರುದ್ಧ ಬಂಧನ ವಾರಂಟ್ ಜಾರಿ

Lingaraj Badiger

ಕೋಲ್ಕತ್ತಾ: ಎರಡು ಚಿನ್ನದ ಅಂಗಡಿಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿಸಿತ್ ಪ್ರಮಾಣಿಕ್ ಅವರ ವಿರುದ್ಧ ಪಶ್ಚಿಮ ಬಂಗಾಳದ ಅಲಿಪುರ್ದೂರ್ ಜಿಲ್ಲಾ ನ್ಯಾಯಾಲಯ ಮಂಗಳವಾರ ಬಂಧನ ವಾರಂಟ್ ಜಾರಿ ಮಾಡಿದೆ.

2009ರಲ್ಲಿ ಅಲಿಪುರ್ದೂರ್ ನ ಎರಡು ಚಿನ್ನದ ಅಂಗಡಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಚ್‌ ಬೆಹಾರ್‌ ಬಿಜೆಪಿ ಸಂಸದ ಪ್ರಮಾಣಿಕ್‌ ವಿರುದ್ಧ ಅಲಿಪುರ್ದೂರ್ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ 3ನೇ ನ್ಯಾಯಾಲಯ ವಾರಂಟ್‌ ಜಾರಿ ಮಾಡಿದೆ.

ಈ ಬಗ್ಗೆ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನತಾ ನಾರಾಯಣ ಮಜುಂದಾರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಆರಂಭದಲ್ಲಿ ಈ ವಿಷಯವನ್ನು ಉತ್ತರ 24 ಪರಗಣ ಜಿಲ್ಲೆಯ ಬರಾಸತ್‌ನಲ್ಲಿರುವ ನ್ಯಾಯಾಲಯ ವಿಚಾರಣೆ ನಡೆಸಿತು. ನಂತರ ಪ್ರಕರಣವನ್ನು ಅಲಿಪುರ್ದೂರ್ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು ಎಂದು ಹೇಳಿದ್ದಾರೆ.

ನವೆಂಬರ್ 11, 2022 ರಂದು, ಪ್ರಕರಣದ ಇತರ ಆರೋಪಿಗಳು ಜಾಮೀನು ಕೋರಿ ಅರ್ಜಿಗಳನ್ನು ಸಲ್ಲಿಸಿದರು. ಆದರೆ ನಿಸಿತ್ ಪ್ರಮಾಣಿಕ್ ಕಡೆಯಿಂದ ಅಂತಹ ಯಾವುದೇ ಅರ್ಜಿ ಸಲ್ಲಿಕೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

SCROLL FOR NEXT