ಮಧ್ಯ ಪ್ರದೇಶದ ಸಚಿವೆ ಉಷಾ ಠಾಕುರ್ 
ದೇಶ

'ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು, ಅಂತ್ಯಕ್ರಿಯೆಗೆ ಅವಶಾಶ ನೀಡಬಾರದು': ಸಚಿವೆ ಉಷಾ ಠಾಕುರ್

ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಮತ್ತು ಅಂತಹ ಅಪರಾಧಗಳಲ್ಲಿ ಇತರರು ಭಾಗಿಯಾಗದಂತೆ ತಡೆಯುವ ಪ್ರಯತ್ನದಲ್ಲಿ ಅಂತವರ ಅಂತ್ಯಕ್ರಿಯೆಗೆ ಅವಕಾಶ ನೀಡಬಾರದು ಎಂದು ಮಧ್ಯಪ್ರದೇಶದ ಸಂಸ್ಕೃತಿ ಸಚಿವೆ ಉಷಾ ಠಾಕೂರ್ ಒತ್ತಾಯಿಸಿದ್ದಾರೆ.

ಇಂದೋರ್: ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಮತ್ತು ಅಂತಹ ಅಪರಾಧಗಳಲ್ಲಿ ಇತರರು ಭಾಗಿಯಾಗದಂತೆ ತಡೆಯುವ ಪ್ರಯತ್ನದಲ್ಲಿ ಅಂತವರ ಅಂತ್ಯಕ್ರಿಯೆಗೆ ಅವಕಾಶ ನೀಡಬಾರದು ಎಂದು ಮಧ್ಯಪ್ರದೇಶದ ಸಂಸ್ಕೃತಿ ಸಚಿವೆ ಉಷಾ ಠಾಕೂರ್ ಒತ್ತಾಯಿಸಿದ್ದಾರೆ.

ಸೋಮವಾರ ರಾತ್ರಿ ಇಂದೋರ್ ಜಿಲ್ಲೆಯ ಮೋವ್ ತೆಹಸಿಲ್‌ನ ಕೊಡರಿಯಾ ಗ್ರಾಮದಲ್ಲಿ ಸಭೆಯನ್ನುದ್ದೇಶಿಸಿ ಠಾಕೂರ್ ಈ ಹೇಳಿಕೆಗಳನ್ನು ನೀಡಿದ್ದಾರೆ. ಮೋವ್ ಶಾಸಕರ ಹೇಳಿಕೆಗಳ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

'ಹೆಹ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗುವ ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿಯೇ ಗಲ್ಲಿಗೇರಿಸಬೇಕು ಮತ್ತು ಅಂತಹ ವ್ಯಕ್ತಿಗಳ ಅಂತ್ಯಕ್ರಿಯೆಗೆ ಸಹ ಅನುಮತಿ ನೀಡಬಾರದು ಎಂದು ನಾನು ಬಯಸುತ್ತೇನೆ. ಹದ್ದುಗಳು ಮತ್ತು ಕಾಗೆಗಳು ಅಂತಹ ವ್ಯಕ್ತಿಯ ದೇಹವನ್ನು ಚೂರುಚೂರು ತಿಂದು ಹಾಕಲಿ. ಪ್ರತಿಯೊಬ್ಬರೂ ಈ ದೃಶ್ಯವನ್ನು ವೀಕ್ಷಿಸಿದಾಗ, ಯಾರೊಬ್ಬರೂ ಮತ್ತೆ ಹೆಣ್ಣು ಮಕ್ಕಳನ್ನು ಮುಟ್ಟಲು ಧೈರ್ಯ ಮಾಡುವುದಿಲ್ಲ' ಎಂದು ಠಾಕೂರ್ ಹೇಳಿದರು.

ಈ ವಿಚಾರವಾಗಿ ಠಾಕೂರ್ ಅವರನ್ನು ಸಂಪರ್ಕಿಸಿದಾಗ, 'ಇಂತಹ ವಿಷಯಗಳು ಹೆಚ್ಚಿನ ಸಂಖ್ಯೆಯ ಜನರನ್ನು ತಲುಪಬೇಕು ಮತ್ತು ಅದು ಸಮಾಜದ ಒಳಿತಿಗಾಗಿ' ಎಂದು ಹೇಳಿದರು.

'ಅತ್ಯಾಚಾರಿಗಳು ಸಾರ್ವಜನಿಕವಾಗಿ ಅಪರಾಧಗಳನ್ನು ಮಾಡುತ್ತಾರೆ ಮತ್ತು ಜೈಲಿನಲ್ಲಿ ಶಿಕ್ಷೆಗೆ ಒಳಗಾಗುತ್ತಾರೆ. ಇದರಿಂದಾಗಿಯೇ ಅವರಲ್ಲಿ ಯಾವುದೇ ಭಯವಿಲ್ಲ. ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಲು ಸಹಿ ಅಭಿಯಾನಕ್ಕೆ ಜನರು ಮುಂದೆ ಬರಬೇಕೆಂದು ಅವರು ಮನವಿ ಮಾಡಿದರು. ಪ್ರತಿ ಕುಟುಂಬದ ಮಹಿಳೆಯರು ಇದರಲ್ಲಿ ಭಾಗವಹಿಸಬೇಕು' ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT