ಪ್ರಧಾನಿ ಮೋದಿ (ಸಂಗ್ರಹ ಚಿತ್ರ) 
ದೇಶ

ಜಗತ್ತಿನ ಶ್ರೇಷ್ಠ 'ಈವೆಂಟ್ ಮ್ಯಾನೇಜರ್'ಗೆ ಪ್ರಚಾರ ಗಿಟ್ಟಿಸಲು ಮತ್ತೊಂದು ಅವಕಾಶ: 2023ರ ಜಿ-20 ಬಗ್ಗೆ ಕಾಂಗ್ರೆಸ್

 2023 ರ ಜಿ-20 ಶೃಂಗಸಭೆಯ ಅಧ್ಯಕ್ಷತೆಯನ್ನು ಭಾರತಕ್ಕೆ ಹಸ್ತಾಂತರಿಸಲಾಗಿದ್ದು, ಕಾಂಗ್ರೆಸ್ ಈ ವಿಷಯದಲ್ಲೂ ಕುಹಕವಾಡಿದೆ. 

ನವದೆಹಲಿ: 2023 ರ ಜಿ-20 ಶೃಂಗಸಭೆಯ ಅಧ್ಯಕ್ಷತೆಯನ್ನು ಭಾರತಕ್ಕೆ ಹಸ್ತಾಂತರಿಸಲಾಗಿದ್ದು, ಕಾಂಗ್ರೆಸ್ ಈ ವಿಷಯದಲ್ಲೂ ಕುಹಕವಾಡಿದೆ. 

ಜಿ-20ಯ ಮುಂದಿನ ಶೃಂಗಸಭೆಗೆ ಭಾರತ ಆತಿಥ್ಯ ವಹಿಸುತ್ತಿರುವ ವಿಷಯವನ್ನಿಟ್ಟುಕೊಂಡು ಪ್ರಧಾನಿ ಮೋದಿ ಅವರನ್ನು ಲೇವಡಿ ಮಾಡಿರುವ ಕಾಂಗ್ರೆಸ್, 2023 ರ ಜಿ-20 ಶೃಂಗಸಭೆಯನ್ನು ಜಗತ್ತಿನ ಶ್ರೇಷ್ಠ ಈವೆಂಟ್ ಮ್ಯಾನೇಜರ್ (ಪ್ರಧಾನಿ ಮೋದಿ) ಲೋಕಸಭಾ ಚುನಾವಣೆಗೆ ಯಶಸ್ವಿಯಾಗಿ ಬಳಸಿಕೊಳ್ಳಲಿದ್ದಾರೆ ಎಂದು ಹೇಳಿದೆ.

ಇಂಡೋನೇಷ್ಯಾದ ಬಾಲಿಯಲ್ಲಿ ಮುಕ್ತಾಯಗೊಂಡ ಪ್ರಸಕ್ತ ಸಾಲಿನ ಜಿ-20 ಶೃಂಗಸಭೆಯಲ್ಲಿ ಮುಂದಿನ ಅಧ್ಯಕ್ಷತೆಯನ್ನು ಭಾರತಕ್ಕೆ ಹಸ್ತಾಂತರಿಸಲಾಯಿತು. 

ಜಿ-20ಯ ಅಧ್ಯಕ್ಷತೆಯನ್ನು ಭಾರತ ಡಿ.1 ರಿಂದ ವಹಿಸಿಕೊಳ್ಳಲಿದೆ. ಮುಂದಿನ ಜಿ-20 ನಾಯಕರ ಶೃಂಗಸಭೆ 2023 ರ ಸೆ.9-10 ರಂದು ನವದೆಹಲಿಯಲ್ಲಿ ನಡೆಯಲಿದೆ. 

ಸಂವಹನ ವಿಭಾಗದ ಉಸ್ತುವಾರಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದು, ಜಿ-20 ಎಂಬುದು 19 ಪ್ರಮುಖ ಆರ್ಥಿಕತೆಗಳ ಒಕ್ಕೂಟವಾಗಿದ್ದು, 1999 ರಲ್ಲಿ ಯುರೋಪಿಯನ್ ಯೂನಿಯನ್ ನ್ನು ಸ್ಥಾಪಿಸಲಾಯಿತು. 2008 ರಿಂದ ಶೃಂಗಸಭೆಯನ್ನು ಸರತಿಯ ಪ್ರಕಾರ ಪ್ರತಿ ಸದಸ್ಯ ರಾಷ್ಟ್ರಗಳಲ್ಲಿ ನಡೆಸಲಾಗುತ್ತಿದೆ. ಪ್ರತಿಯೊಂದು ರಾಷ್ಟ್ರಕ್ಕೂ ಈ ಅವಕಾಶ ಸಿಗಲಿದ್ದು, 2023 ರಲ್ಲಿ ಭಾರತವೂ ಆತಿಥ್ಯ ವಹಿಸುತ್ತಿದೆ ಎಂದು ಹೇಳಿದ್ದಾರೆ.

ಈ ಹಿಂದೆ ನಡೆದ ಶೃಂಗಸಭೆಗಳಂತೆಯೇ ಈ ಶೃಂಗಸಭೆಯನ್ನೂ ಸ್ವಾಗತಿಸಬೇಕು, 100 ಕ್ಕೂ ಹೆಚ್ಚು ರಾಷ್ಟ್ರಗಳನ್ನೊಳಗೊಂಡ ಅಲಿಪ್ತ ಶೃಂಗಸಭೆ 1983 ರಲ್ಲಿ ನವದೆಹಲಿಯಲ್ಲಿ ನಡೆದಿತ್ತು ಹಾಗೂ ಅದಾದ ಬಳಿಕ ಕಾಮನ್ ವೆಲ್ತ್ ಶೃಂಗಸಭೆಯೂ ನಡೆದಿತ್ತು ಎಂದು ಜೈರಾಮ್ ರಮೇಶ್ ಹೇಳಿದ್ದಾರೆ. 

ಆದರೆ 2023 ರ ಜಿ-20 ಶೃಂಗಸಭೆಯನ್ನು ಲೋಕಸಭಾ ಚುನಾವಣೆಗಾಗಿ ಜಗತ್ತಿನ ಶ್ರೇಷ್ಠ ಈವೆಂಟ್ ಮ್ಯಾನೇಜರ್ ಪ್ರಚಾರಕ್ಕೆ ಬಳಸಿಕೊಳ್ಳಲಿದ್ದು ಜನರ ನೈಜ ವಿಷಯಗಳನ್ನು ಮರೆಮಾಚುತ್ತಾರೆ ಎಂದು ಜೈರಾಮ್ ರಮೇಶ್ ಪ್ರಧಾನಿ ಮೋದಿ ಹೆಸರು ಹೇಳದೇ ವ್ಯಂಗ್ಯವಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT