ದೇಶ

ಹಿಮಾಚಲ ಪ್ರದೇಶದಲ್ಲಿ 4.1 ತೀವ್ರತೆಯ ಭೂಕಂಪ

Lingaraj Badiger

ನವದೆಹಲಿ: ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಬುಧವಾರ 4.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

ಇಂದು ರಾತ್ರಿ 9:32 ಕ್ಕೆ ಭೂಮಿ ಕಂಪಿಸಿದ್ದು, ಕಂಪನದ ಕೇಂದ್ರಬಿಂದು ಗುಡ್ಡಗಾಡು ರಾಜ್ಯದ ಮಂಡಿಯಿಂದ ವಾಯುವ್ಯಕ್ಕೆ 27 ಕಿಮೀ ದೂರದಲ್ಲಿದೆ. ರಿಕ್ಟರ್ ಮಾಪನದಲ್ಲಿ 4.1ರ ತೀವ್ರತೆಯ ಭೂಕಂಪನ ಉಂಟಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ಹಿಮಾಲಯ ಪ್ರದೇಶವು ಕಳೆದ ಹದಿನೈದು ದಿನಗಳಿಂದ ಸರಣಿ ಭೂಕಂಪಗಳಿಗೆ ಸಾಕ್ಷಿಯಾಗಿದೆ.

ಉತ್ತರಾಖಂಡ-ನೇಪಾಳ ಗಡಿಯುದ್ದಕ್ಕೂ ಹಿಮಾಲಯ ಪ್ರದೇಶದಲ್ಲಿ ನವೆಂಬರ್ 8 ಮತ್ತು 16ರ ನಡುವೆ ಕನಿಷ್ಠ 10 ಕಂಪಗಳು ಸಂಭವಿಸಿವೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಅಂಕಿಅಂಶಗಳು ತಿಳಿಸಿವೆ.

SCROLL FOR NEXT