ದೇಶ

ಮಂಗಳೂರಿನಲ್ಲಿ ಆಟೋ ಸ್ಫೋಟ: ತಮಿಳುನಾಡು ಪೊಲೀಸರಿಂದ ಆರೋಪಿಯೊಂದಿಗೆ ನಂಟು ಹೊಂದಿದ್ದ ವ್ಯಕ್ತಿಯ ವಿಚಾರಣೆ

Lingaraj Badiger

ಉದಕಮಂಡಲ: ಕರ್ನಾಟಕದ ಮಂಗಳೂರಿನಲ್ಲಿ ನಡೆದ ಆಟೋರಿಕ್ಷಾ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉದಕಮಂಡಲದಲ್ಲಿ 40 ವರ್ಷದ ವ್ಯಕ್ತಿಯನ್ನು ತಮಿಳುನಾಡು ಪೊಲೀಸರು ಭಾನುವಾರ ವಿಚಾರಣೆ ನಡೆಸಿದ್ದಾರೆ.

ಮಾಹಿತಿಯ ಆಧಾರದ ಮೇಲೆ ಪೊಲೀಸರು ಕುಂಡಾಸಪ್ಪಾಯಿ ಗ್ರಾಮಕ್ಕೆ ಧಾವಿಸಿ ಘಟನೆಗೆ ಸಂಬಂಧಿಸಿದಂತೆ  ಸುರೇಂದ್ರನನ್ನು ವಿಚಾರಿಸದರು. ಸ್ಫೋಟ ಪ್ರಕರಣದ ಆರೋಪಿ ಬಳಸುತ್ತಿದ್ದ ಮೊಬೈಲ್ ಸಿಮ್ ಕಾರ್ಡ್ ಅನ್ನು ಸುರೇಂದ್ರನ ಆಧಾರ್ ಕಾರ್ಡ್ ಬಳಸಿ ಖರೀದಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗೆ ಸಿಮ್ ಕಾರ್ಡ್ ಖರೀದಿಸಲು ಸುರೇಂದ್ರನ್ ಸಹಾಯ ಮಾಡಿದ್ದಾನೋ ಅಥವಾ ಆರೋಪಿಯು ಆತನಿಗೆ ತಿಳಿಯದಂತೆ ನಂಬರ್ ಬಳಸಿದ್ದನೇ ಅಥವಾ ಸಿಮ್ ಕಾರ್ಡ್ ಅನ್ನು ನಕಲಿ ಆಧಾರ್ ಕಾರ್ಡ್ ಸಲ್ಲಿಸಿ ಖರೀದಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚಿನ ವಿಚಾರಣೆಗಾಗಿ ಸುರೇಂದ್ರನ್ ಅವರನ್ನು ಕೊಯಮತ್ತೂರಿಗೆ ಕರೆದೊಯ್ಯಲಾಗುತ್ತಿದೆ.

ಮಂಗಳೂರಿನಲ್ಲಿ ಶನಿವಾರ ಸಂಜೆ ಪೊಲೀಸ್ ಠಾಣೆ ಬಳಿ ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ಸ್ಫೋಟ ಸಂಭವಿಸಿ ಪ್ರಯಾಣಿಕರು ಮತ್ತು ಚಾಲಕ ಗಾಯಗೊಂಡಿದ್ದಾರೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

SCROLL FOR NEXT