ದೇಶ

ಲಡಾಖ್‌ನ ಕಾರ್ಗಿಲ್‌ನಲ್ಲಿ 4.2 ತೀವ್ರತೆಯ ಭೂಕಂಪ, ಯಾವುದೇ ಪ್ರಾಣಹಾನಿಯಾಗಿಲ್ಲ

Lingaraj Badiger

ಲೇಹ್/ಜಮ್ಮು: ಲಡಾಖ್‌ನ ಕಾರ್ಗಿಲ್ ಜಿಲ್ಲೆಯಲ್ಲಿ ಮಂಗಳವಾರ 4.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ಭೂಕಂಪನದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಇಂದು ಬೆಳಗ್ಗೆ 10.05ಕ್ಕೆ ಭೂಮಿ ಕಂಪಿಸಿದ್ದು, ಕಂಪನದ ಕೇಂದ್ರಬಿಂದು ಕಾರ್ಗಿಲ್‌ನಿಂದ ಉತ್ತರಕ್ಕೆ 191 ಕಿಲೋಮೀಟರ್ ದೂರದಲ್ಲಿದೆ. ರಿಕ್ಟರ್ ಮಾಪನದಲ್ಲಿ 4.2 ತೀವ್ರತೆಯ ಭೂಕಂಪನ ಉಂಟಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

SCROLL FOR NEXT