ದೇಶ

ಮಹಾರಾಷ್ಟ್ರ: ಬಿಜೆಪಿ ಎದುರಿಸಲು ಉದ್ಧವ್ ಠಾಕ್ರೆ- ಪ್ರಕಾಶ್ ಅಂಬೇಡ್ಕರ್ ಮೈತ್ರಿ ಸಾಧ್ಯತೆ

Lingaraj Badiger

ಮುಂಬೈ: ಹೆಚ್ಚುತ್ತಿರುವ ಸರ್ವಾಧಿಕಾರವನ್ನು ಮಣಿಸಲು ಉದ್ಧವ್ ಬಾಳಾಸಾಹೇಬ್ ಠಾಕ್ರೆ ಅವರು ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರಿಗೆ ಹೊಸ ರಾಜಕೀಯ ಪ್ರಯೋಗಕ್ಕೆ ಕೈ ಜೋಡಿಸುವಂತೆ ಒತ್ತಾಯಿಸಿದ್ದಾರೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಶಿವಶಕ್ತಿ ಮತ್ತು ಭೀಮಾ ಶಕ್ತಿ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ.

ಉದ್ಧವ್ ಠಾಕ್ರೆ ಮತ್ತು ಪ್ರಕಾಶ್ ಅಂಬೇಡ್ಕರ್ ಅವರು ಭಾನುವಾರ ಪ್ರಬೋಧಂಕರ್ ಡಾಟ್ ಕಾಮ್ ವೆಬ್‌ಸೈಟ್ ಗೆ ಚಾಲನೆ ನೀಡಲು ಒಟ್ಟಿಗೆ ಆಗಮಿಸಿದ್ದರು.

ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ್ ಬಹುಜನ ಅಘಾಡಿ - ಭೀಮಾ ಶಕ್ತಿ ವಿದರ್ಭ ಪ್ರದೇಶದಲ್ಲಿ ವಿಶೇಷವಾಗಿ ದಲಿತ ಮತದಾರರ ಮೇಲೆ ಗಮನಾರ್ಹ ಪ್ರಭಾವ ಹೊಂದಿದ್ದು, ಶಿವಶಕ್ತಿ(ಉದ್ಧವ್ ಠಾಕ್ರೆ) ಹಿಂದೂ ಮತದಾರರ ಮೇಲೆ ಮತ್ತಷ್ಟು ಪ್ರಭಾವ ಬೀರಬಹುದು.

2019ರ ಲೋಕಸಭಾ ಚುನಾವಣೆಯಲ್ಲಿ, ವಂಚಿತ್ ಬಹುಜನ ಅಘಾಡಿ ಶೇಕಡಾ 14 ರಷ್ಟು ಮತಗಳನ್ನು ಗಳಿಸುವ ಮೂಲಕ ನಾಂದೇಡ್ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಸೇರಿದಂತೆ 10 ಕಾಂಗ್ರೆಸ್ ಮತ್ತು ಎನ್‌ಸಿಪಿ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿತ್ತು.

ಉದ್ಧವ್ ಠಾಕ್ರೆ ಅವರು ಸಮಾಜ ಸುಧಾರಕ ಪ್ರಬೋಧಂಕರ್ ಠಾಕ್ರೆಯವರ ಮೊಮ್ಮಗನಾಗಿದ್ದು, ಅವರು ಮರಾಠಿಗರಿಗಾಗಿ ಶಿವಸೇನೆಯನ್ನು ಸ್ಥಾಪಿಸಿದರು. ನಂತರ ಅದನ್ನು ಅವರ ಮಗ ಬಾಳಾಸಾಹೇಬ್ ಠಾಕ್ರೆ ಅದರ ನೇತೃತ್ವ ವಹಿಸಿದ್ದರು. ಇನ್ನೊಂದು ಕಡೆ ದಲಿತ ನಾಯಕ ಪ್ರಕಾಶ್ ಅಂಬೇಡ್ಕರ್ ಅವರು ಸಮಾಜದ ಶೋಷಿತ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗನಾಗಿದ್ದಾರೆ.

SCROLL FOR NEXT