ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ PSLV-C54 ಉಡ್ಡಯನ 
ದೇಶ

ಇಸ್ರೊದಿಂದ 8 ನ್ಯಾನೊ ಉಪಗ್ರಹ, PSLV-C54 ರಾಕೆಟ್ ಬಾಹ್ಯಾಕಾಶಕ್ಕೆ ಯಶಸ್ವಿ ಉಡಾವಣೆ

ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ (ISRO) ಶನಿವಾರ ಪಿಎಸ್‌ಎಲ್‌ವಿ-ಸಿ 54 ರಾಕೆಟ್ ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. Oceansat-3 ಎಂದೂ ಕರೆಯಲ್ಪಡುವ EOS-06 ಮತ್ತು 8 ನ್ಯಾನೊ ಉಪಗ್ರಹಗಳನ್ನು ಹೊತ್ತ ರಾಕೆಟ್ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿತು.

ಶ್ರೀಹರಿಕೋಟ: ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ (ISRO) ಶನಿವಾರ ಪಿಎಸ್‌ಎಲ್‌ವಿ-ಸಿ 54 ರಾಕೆಟ್ ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. Oceansat-3 ಎಂದೂ ಕರೆಯಲ್ಪಡುವ EOS-06 ಮತ್ತು 8 ನ್ಯಾನೊ ಉಪಗ್ರಹಗಳನ್ನು ಹೊತ್ತ ರಾಕೆಟ್ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿತು.

ಇಸ್ರೋ ಕೈಗೊಂಡ ಈ ವರ್ಷದ ಕೊನೆಯ ಉಡಾವಣೆ ಇದಾಗಿದೆ. PSLV-C54 ಭೂಮಿಯ ವೀಕ್ಷಣಾ ಉಪಗ್ರಹ (EOS-06) ಅಥವಾ ಓಷನ್‌ಸ್ಯಾಟ್ ನ್ನು ಅದರ ಪ್ರಾಥಮಿಕ ಪೇಲೋಡ್ ಆಗಿ ಒಯ್ಯುತ್ತದೆ. ಎಂಟು ಸಹ-ಪ್ರಯಾಣಿಕ ಉಪಗ್ರಹಗಳನ್ನು ಎರಡು ಗಂಟೆಗಳ ಕಾಲಾವಧಿಯಲ್ಲಿ ಸೂರ್ಯನ ಸಿಂಕ್ರೊನಸ್ ಕಕ್ಷೆಗಳಲ್ಲಿ ಇರಿಸಲಿದೆ. 

ಭಾರತೀಯ ಕಾಲಮಾನ ಇಂದು ಬೆಳಗ್ಗೆ 11.56ಕ್ಕೆ ಉಡಾವಣೆಯಾಗಿದ್ದು, ಇನ್ನು ಎರಡು ಗಂಟೆಗಳಲ್ಲಿ ಉಪಗ್ರಹಗಳ ಸಂಪೂರ್ಣ ಬೇರ್ಪಡಿಕೆ ಸಂಭವಿಸುವ ನಿರೀಕ್ಷೆಯಿದೆ. ಭೂಮಿಯ ವೀಕ್ಷಣಾ ಉಪಗ್ರಹ-6 ಓಷನ್‌ಸ್ಯಾಟ್ ಸರಣಿಯ ಮೂರನೇ ತಲೆಮಾರಿನ ಉಪಗ್ರಹವಾಗಿದೆ. ವರ್ಧಿತ ಪೇಲೋಡ್ ವಿಶೇಷಣಗಳು ಮತ್ತು ಅಪ್ಲಿಕೇಶನ್ ಪ್ರದೇಶಗಳೊಂದಿಗೆ Oceansat-2 ಬಾಹ್ಯಾಕಾಶ ನೌಕೆಯ ನಿರಂತರತೆಯ ಸೇವೆಗಳನ್ನು ಇದು ಒದಗಿಸುತ್ತದೆ.

ಇಸ್ರೋ ಇಂದು ಭೂ ವೀಕ್ಷಣಾ ಉಪಗ್ರಹ, ಓಷನ್‌ಸ್ಯಾಟ್ -3 ಮತ್ತು ಇತರ ಎಂಟು ಗ್ರಾಹಕ ಉಪಗ್ರಹಗಳನ್ನು ಎರಡು ವಿಭಿನ್ನ ಕಕ್ಷೆಗಳಲ್ಲಿ ಒಂದೇ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇಸ್ರೋದ 56 ನೇ ಹಾರಾಟದಲ್ಲಿ, ಪಿಎಸ್‌ಎಲ್‌ವಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಲಾಂಚ್‌ಪ್ಯಾಡ್‌ನಿಂದ ಬೆಳಿಗ್ಗೆ 11.56 ಕ್ಕೆ ಮೇಲಕ್ಕೆ ಹಾರಿತು. ಮೋಡ ಕವಿದ ವಾತಾವರಣವು ನೋಡುಗರ ವೀಕ್ಷಣೆಗೆ ಅಡ್ಡಿಪಡಿಸಿದರೂ ಇದು ಪರಿಪೂರ್ಣವಾದ ಉಡಾವಣೆಯಾಗಿತ್ತು.

ಉಪಗ್ರಹಗಳನ್ನು ವಿವಿಧ ಎತ್ತರಗಳಲ್ಲಿ ವಿವಿಧ ಕಕ್ಷೆಗಳಲ್ಲಿ ಇರಿಸಲು ವಿಜ್ಞಾನಿಗಳು ಹಲವಾರು ಕುಶಲತೆಯನ್ನು ಈ ಕಾರ್ಯಾಚರಣೆಯಲ್ಲಿ ಕೈಗೊಂಡಿದ್ದಾರೆ. ಇಸ್ರೋ ಕೈಗೊಂಡಿರುವ ಸುದೀರ್ಘ ಕಾರ್ಯಾಚರಣೆಗಳಲ್ಲಿ ಇದು ಕೂಡ ಒಂದಾಗಿದೆ. ಒಟ್ಟು ಕಾರ್ಯಾಚರಣೆಯ ಅವಧಿಯು ಸುಮಾರು 2 ಗಂಟೆಗಳು.

ಓಷನ್‌ಸ್ಯಾಟ್ ಸರಣಿಯ ಮೂರನೇ ತಲೆಮಾರಿನ ಉಪಗ್ರಹವಾಗಿರುವ ಪ್ರಾಥಮಿಕ ಉಪಗ್ರಹ EOS-06 ನ್ನು 742 ಕಿಮೀ ಎತ್ತರದಲ್ಲಿ ಲಿಫ್ಟ್-ಆಫ್‌ನಿಂದ 17 ನಿಮಿಷಗಳ ನಂತರ ಕಕ್ಷೆ-1 ರಲ್ಲಿ ಇರಿಸಲಾಯಿತು. ತರುವಾಯ, PSLV-C54 ವಾಹನದ ಪ್ರೊಪಲ್ಷನ್ ಬೇ ರಿಂಗ್‌ನಲ್ಲಿ ಎರಡು ಆರ್ಬಿಟ್ ಚೇಂಜ್ ಥ್ರಸ್ಟರ್‌ಗಳನ್ನು (OCTs) ಬಳಸಿಕೊಂಡು ಕಕ್ಷೆಯ ಬದಲಾವಣೆಯನ್ನು ಮಾಡಲಾಯಿತು.

PSLV-C54/EOS-06 ಮಿಷನ್: EOS-06 ಬಾಹ್ಯಾಕಾಶ ನೌಕೆ ಬೇರ್ಪಡಿಕೆ ಯಶಸ್ವಿಯಾಗಿದೆ. ನೌಕೆಯ ಆರೋಗ್ಯ ಸಾಮಾನ್ಯವಾಗಿದೆ. ಮಿಷನ್ ಮುಂದುವರೆಯುತ್ತಿದೆ ಎಂದು ಇಸ್ರೊ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT