ದೇಶ

ಬಿಹಾರ ಉಪಚುನಾವಣೆ: ಮೈತ್ರಿ ಮುರಿದ ನಂತರ ಮೊದಲ ಬಾರಿಗೆ ಬಿಜೆಪಿ-ಜೆಡಿಯು ನೇರ ಹಣಾಹಣಿ

Srinivas Rao BV

ಪಾಟ್ನ: ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿ ಮುರಿದ ನಂತರ ಮೊದಲ ಬಾರಿಗೆ ಉಪಚುನಾವಣೆ ಎದುರಾಗಿದೆ. ಕುರ್ಹಾನಿ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದ್ದು ಬಿಜೆಪಿ-ಜೆಡಿಯು ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ಡಿ.05 ಕ್ಕೆ ಉಪಚುನಾವಣೆ ನಿಗದಿಯಾಗಿದ್ದು, 2020 ರಲ್ಲಿ ಆರ್ ಜೆಡಿ ಟಿಕೆಟ್ ನಿಂದ ಗೆದ್ದಿದ್ದ ಹಾಲಿ ಶಾಸಕ  ಅನಿಲ್ ಸಹಾನಿ ಅವರ ಅನರ್ಹತೆಯಿಂದಾಗಿ ಈ ಉಪಚುನಾವಣೆ ನಡೆಯುತ್ತಿದೆ.

ಈ ಕ್ಷೇತ್ರದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಆರ್ ಜೆಡಿ ಜೆಡಿಯುವನ್ನು ಬೆಂಬಲಿಸಲು ತೀರ್ಮಾನಿಸಿದೆ. 

ಉಪಚುನಾವಣೆಗೆ 13 ಅಭ್ಯರ್ಥಿಗಳು ಸ್ಪರ್ಧಿಸಿದ್ದರೂ ನೇರವಾಗಿ ಜೆಡಿಯು ಹಾಗೂ ಬಿಜೆಪಿ ನಾಯಕ ಕೇದಾರ್ ಪ್ರಸಾದ್ ಗುಪ್ತ ಅವರ ನಡುವೆ ಪೈಪೋಟಿ ಏರ್ಪಟ್ಟಿದೆ. ಎರಡೂ ಪಕ್ಷಗಳು ತಮಗೆ 3.12 ಲಕ್ಷ ಮಂದಿಯ ಬೆಂಬಲವಿದೆ ಎಂದು ಹೇಳಿವೆ.

ಡಿ.08 ರಂದು ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳಲಿದೆ.
 

SCROLL FOR NEXT