ದೇಶ

'ದಿ ಕಾಶ್ಮೀರ್ ಫೈಲ್ಸ್' ನಂತರ ಕಾಶ್ಮೀರದಲ್ಲಿ ಗರಿಷ್ಠ ಸಂಖ್ಯೆಯ ಜನರ ಹತ್ಯೆ: ಸಂಜಯ್ ರಾವತ್

Nagaraja AB

ನವದೆಹಲಿ: ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ್ ಫೈಲ್ಸ್' ಅಸಭ್ಯ ಮತ್ತು ತಪ್ಪು ಪ್ರಚಾರದ ಉದ್ದೇಶ ಹೊಂದಿದೆ ಎಂದು 53ನೇ ಭಾರತೀಯ ಚಲನಚಿತ್ರೋತ್ಸವದ (ಐಎಫ್‌ಎಫ್ಐ) ತೀರ್ಪುಗಾರರ ಮುಖ್ಯಸ್ಥ, ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಡವ್ ಲ್ಯಾಪಿಡ್ ಹೇಳಿಕೆ ಇದೀಗ ಪರ ಹಾಗೂ ವಿರೋಧದ ಚರ್ಚೆಗೆ ಕಾರಣವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಶಿವಸೇನೆಯ ಹಿರಿಯ ಮುಖಂಡ ಸಂಜಯ್ ರಾವತ್, ನಡವ್ ಲ್ಯಾಪಿಡ್ ಹೇಳಿಕೆ ಸರಿಯಾಗಿದೆ. ಒಂದು ಪಕ್ಷದ ವಿರುದ್ಧ ಇನ್ನೊಂದು ಪಕ್ಷದವರು ಅಪ ಪ್ರಚಾರ ಮಾಡುತ್ತಿದ್ದರು. ಒಂದು ಪಕ್ಷ ಮತ್ತು ಸರ್ಕಾರ ಪ್ರಚಾರದಲ್ಲಿ ನಿರತವಾಗಿತ್ತು. ಆದರೆ ಈ ಚಿತ್ರದ ನಂತರ ಕಾಶ್ಮೀರದಲ್ಲಿ ಗರಿಷ್ಠ ಸಂಖ್ಯೆಯ ಹತ್ಯೆಗಳು ಸಂಭವಿಸಿವೆ. ಕಾಶ್ಮೀರ ಪಂಡಿತರು, ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿದರು. 

ಈ ಕಾಶ್ಮೀರ ಫೈಲ್‌ ಜನರು ಆಗ ಎಲ್ಲಿದ್ದರು? ಕಾಶ್ಮೀರಿ ಪಂಡಿತರ ಮಕ್ಕಳೂ ಹೋರಾಟ ಮಾಡುವಾಗ ಎಲ್ಲಿದ್ದರು? ಆಗ ಯಾರೂ ಮುಂದೆ ಬರಲಿಲ್ಲ, ಅಥವಾ ಕಾಶ್ಮೀರ ಫೈಲ್ಸ್ 2.0 ಯೋಜನೆಯೂ ಇರಲಿಲ್ಲ- ಅದನ್ನೂ ಮಾಡಿ ಎಂದು ಸಂಜಯ್ ರಾವತ್ ತೀಕ್ಷ್ಣವಾಗಿ ಪ್ರತಿಕ್ರಿಯಿದರು.

SCROLL FOR NEXT