ದೇಶ

ಎಎಪಿಗೆ ಹಿನ್ನಡೆ: ಗುಜರಾತ್ ಚುನಾವಣಾ ಕಣ ತೊರೆದು ಬಿಜೆಪಿ ಸೇರಿದ ಮತ್ತೊಬ್ಬ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ!

Vishwanath S

ಅಹಮದಾಬಾದ್: ಗುಜರಾತ್ ನಲ್ಲಿ ಎಎಪಿಗೆ ಮತ್ತೊಂದು ಹಿನ್ನಡೆಯಾಗಿದ್ದು ವಿಧಾನಸಭೆ ಚುನಾವಣೆಯ ಟಿಕೆಟ್ ನೀಡಿದ್ದರೂ ಆಮ್ ಆದ್ಮಿ ಪಕ್ಷ(ಎಎಪಿ) ಅಭ್ಯರ್ಥಿಯೊಬ್ಬ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ. 

ಚುನಾವಣೆಗೆ ಮುನ್ನ ಕಚ್ ಜಿಲ್ಲೆಯ ಅಬ್ದಾಸಾ ವಿಧಾನಸಭೆಯ ಅಭ್ಯರ್ಥಿ ವಸಂತ ವಾಲ್ಜಿಭಾಯಿ ಖೇತಾನಿ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಇದಕ್ಕೂ ಮುನ್ನ ಸೂರತ್ ಪೂರ್ವ ಕ್ಷೇತ್ರದಿಂದ ಎಎಪಿ ಅಭ್ಯರ್ಥಿ ಕಾಂಚನ್ ಜರಿವಾಲಾ ನಾಮಪತ್ರ ಹಿಂಪಡೆದಿದ್ದರು. ಎಎಪಿ ಕಛ್ ಜಿಲ್ಲಾ ಸಮಿತಿ ಅಧ್ಯಕ್ಷ ರೋಹಿತ್ ಗೌರ್ ಮಾತನಾಡಿ, ಭಾನುವಾರ ಸಂಜೆಯಿಂದ ಪಕ್ಷದ ಅಭ್ಯರ್ಥಿ ವಸಂತ್ ಭಾಯ್ ಅವರನ್ನು ಸಂಪರ್ಕಿಸಲಾಗಲಿಲ್ಲ. ಬಿಜೆಪಿ ನಾಯಕರು ಖೇತಾನಿಯನ್ನು ಅಪಹರಿಸಿ ಕಾರ್ಖಾನೆಯಲ್ಲಿ ಬಂಧಿಸಿದ್ದಾರೆ ಎಂದು ಆರೋಪಿಸಿದರು.

ಏತನ್ಮಧ್ಯೆ ಭಾನುವಾರ ಸಂಜೆ ಖೇತಾನಿ ಅವರ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿತು. ಅದರಲ್ಲಿ ಅವರು 'ದೇಶದ ಹಿತಾಸಕ್ತಿಯಿಂದ ನಾನು ಎಎಪಿ ತೊರೆದು ಬಿಜೆಪಿಗೆ ಸೇರುತ್ತಿದ್ದೇನೆ' ಎಂದು ಹೇಳಿದ್ದರು. ಬಿಜೆಪಿ ಅಭ್ಯರ್ಥಿ ಪರವಾಗಿ ಚುನಾವಣೆಯಿಂದ ಹಿಂದೆ ಸರಿದು ಬಿಜೆಪಿ ಸೇರಿದ್ದೇನೆ. ಬಿಜೆಪಿ ಸೇರಿದ ನಂತರ, ಖೇತಾನಿ ಅಬ್ದಾಸಾ ಬಿಜೆಪಿ ಅಭ್ಯರ್ಥಿ ಪ್ರದ್ಯುಮಾನ್ ಸಿಂಗ್ ಜಡೇಜಾಗೆ ಬೆಂಬಲವನ್ನು ಘೋಷಿಸಿದರು. ಜಡೇಜಾ 2017ರಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಅಬ್ದಾಸಾ ಸ್ಥಾನದಿಂದ ಗೆದ್ದಿದ್ದರು. ಆದರೆ 2020ರಲ್ಲಿ ಜಡೇಜಾ ಬಿಜೆಪಿ ಸೇರಿದರು.

SCROLL FOR NEXT