ದೇಶ

ಡೆಹ್ರಾಡೂನ್ ವಿಮಾನ ನಿಲ್ದಾಣದಲ್ಲಿ ಸ್ಯಾಟಲೈಟ್ ಫೋನ್‌ ಸಹಿತ ರಷ್ಯಾದ ಮಾಜಿ ಸಚಿವ ಬಂಧನ

Srinivasamurthy VN

ನವದೆಹಲಿ: ಸೂಕ್ತ ದಾಖಲೆಗಳಿಲ್ಲದೆ ಸ್ಯಾಟಲೈಟ್‌ ಫೋನ್‌ ಸಾಗಿಸುತ್ತಿದ್ದ ಆರೋಪದ ಮೇರೆಗೆ ಉತ್ತರಾಖಂಡ ರಾಜಧಾನಿ ಡೆಹ್ರಾಡೂನ್‌ ವಿಮಾನ ನಿಲ್ದಾಣದಲ್ಲಿ  ರಷ್ಯಾದ ಮಾಜಿ ಸಚಿವರೊಬ್ಬರನ್ನು ಬಂಧಿಸಲಾಗಿದೆ.

ಭಾನುವಾರ ಸಂಜೆ ಈ ಬಂಧನವಾಗಿದ್ದು, ವಿಮಾನ ನಿಲ್ದಾಣಗಳಲ್ಲಿ ಮತ್ತು ವಿಮಾನಗಳಲ್ಲಿ ಪೂರ್ವಾನುಮತಿ ಇಲ್ಲದೆ ಉಪಗ್ರಹ ಫೋನ್‌ಗಳನ್ನು ಅನುಮತಿಸಲಾಗುವುದಿಲ್ಲ. ಈ ನಿಯಮ ಉಲ್ಲಂಘಿಸಿ ಸ್ಯಾಟಲೈಟ್ ಫೋನ್ ನೊಂದಿಗೆ ಇದ್ದ ರಷ್ಟಾ ಮಾಜಿ ಸಚಿವ ವಿಕ್ಟರ್ ಸೆಮೆನೋವ್, 64 ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ವಿಕ್ಟರ್ ಸೆಮೆನೋವ್ ಅವರು 1998 ರಿಂದ 1999 ರವರೆಗೆ ರಷ್ಯಾದ ಕೃಷಿ ಮತ್ತು ಆಹಾರ ಸಚಿವರಾಗಿದ್ದರು. ಮಾಸ್ಕೋದಲ್ಲಿ ನೆಲೆಸಿರುವ ಸೆಮೆನೋವ್ ಅವರು ಇಂಡಿಗೋ ವಿಮಾನದಲ್ಲಿ ದೆಹಲಿಗೆ ತೆರಳಬೇಕಿತ್ತು. ಭಾನುವಾರ ಸಂಜೆ 4:20 ಕ್ಕೆ ಭದ್ರತಾ ತಪಾಸಣೆಯ ಸಮಯದಲ್ಲಿ ವಿಮಾನ ನಿಲ್ದಾಣಗಳ ಕಾವಲುಗಾರರಾದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿಗಳು ಅವರನ್ನು ತಡೆದರು. 

ಸ್ಯಾಟಲೈಟ್ ಫೋನ್ ಸಾಧನವನ್ನು ಹೊಂದಿದ್ದಕ್ಕಾಗಿ ಅವರು ಯಾವುದೇ ಮಾನ್ಯ ದಾಖಲೆಗಳನ್ನು ನೀಡಲು ಸಾಧ್ಯವಾಗಲಿಲ್ಲ. ಪೋಲೀಸರು ದಾಖಲಿಸಿರುವ ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ಪ್ರಕಾರ ತುರ್ತು ಸಂದರ್ಭದಲ್ಲಿ ವೈಯಕ್ತಿಕ ಬಳಕೆಗಾಗಿ ಸ್ಯಾಟಲೈಟ್ ಫೋನ್ ಕೊಂಡೊಯ್ಯಲಾಗುತ್ತಿತ್ತು ಎಂದು ರಷ್ಯಾದ ಮಾಜಿ ಸಚಿವರು ಹೇಳಿದ್ದಾರೆ.
 

SCROLL FOR NEXT