ಜನರ ಮೇಲೆ ಬಿದ್ದ ಬೆಂಕಿ ಹೊತ್ತಿದ್ದ ರಾವಣನ ಕಟೌಟ್ 
ದೇಶ

ವಿಜಯದಶಮಿ: ರಾವಣ ದಹನ ವೇಳೆ ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ಅವಘಡ

ವಿಜಯದಶಮಿ ನಿಮಿತ್ತ ಆಯೋಜಿಸಿದ್ದ ರಾವಣ ದಹನ ಕಾರ್ಯಕ್ರಮದ ವೇಳೆ ಸಂಭವಿಸಬಹುದಾಗಿದ್ದ ಭಾರಿ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

ಚಂಡೀಘಡ: ವಿಜಯದಶಮಿ ನಿಮಿತ್ತ ಆಯೋಜಿಸಿದ್ದ ರಾವಣ ದಹನ ಕಾರ್ಯಕ್ರಮದ ವೇಳೆ ಸಂಭವಿಸಬಹುದಾಗಿದ್ದ ಭಾರಿ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

ಹರ್ಯಾಣದ ಯಮುನಾನಗರದಲ್ಲಿ ಆಯೋಜಿಸಲಾಗಿದ್ದ ರಾವಣ ದಹನ ಕಾರ್ಯಕ್ರಮದ ವೇಳೆ ಬೆಂಕಿ ಹಚ್ಚಲಾಗಿದ್ದ ರಾವಣನ ದೊಡ್ಡ ಕಟೌಟ್ ವೊಂದು ನೆರೆದಿದ್ದವರ ಮೇಲೆ ಬಿದ್ದ ಘಟನೆ ಹರ್ಯಾಣದಲ್ಲಿ ನಡೆದಿದೆ. 

ಹರ್ಯಾಣ ಯಮುನಾನಗರದಲ್ಲಿ ಸ್ಥಳೀಯರು ಆಯೋಜಿಸಿದ್ದ  ರಾವಣ ದಹನ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ರಾವಣ ದಹನ ಬಳಿಕ ಬೆಂಕಿ ಹೊತ್ತಿಕೊಂಡಿದ್ದ ರಾವಣನ ಕಟೌಟ್ ನೋಡನೋಡುತ್ತಿದ್ದಂತೆಯೇ ಅಲ್ಲಿ ನೆರೆದಿದ್ದವರ ಮೇಲೆ ಬಿದ್ದಿದೆ.

ಅದೃಷ್ಟವಶಾತ್ ಅಪಾಯದ ಮುನ್ಸೂಚನೆ ಅರಿತ ಜನ ಅಲ್ಲಿಂದ ಕೂಡಲೇ ಚದುರಿದ್ದಾರೆ. ಹೀಗಾಗಿ ಯಾರಿಗೂ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ