ದೇಶ

ಟಿಆರ್ ಎಸ್ ನಲ್ಲಿ ಒಡಕು? ರಾಷ್ಟ್ರೀಯ ಪಕ್ಷ ಘೋಷಣಾ ಸಮಾರಂಭದಿಂದ ಕವಿತಾ ದೂರ, ಅನೇಕ ಅನುಮಾನಗಳು 

Nagaraja AB

ಹೈದರಾಬಾದ್: ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಇತ್ತೀಚಿಗೆ ತಮ್ಮ ಹೊಸ ರಾಷ್ಟ್ರೀಯ ಪಕ್ಷ ಭಾರತ್ ರಾಷ್ಟ್ರ ಸಮಿತಿ ಘೋಷಣಾ ಸಮಾರಂಭದಲ್ಲಿ ಕೆಸಿಆರ್ ಅವರ ಪುತ್ರಿ ಹಾಗೂ ಪಕ್ಷದ ಹಿರಿಯ ಮುಖಂಡರಾದ ಕೆ. ಕವಿತಾ ಗೈರಾದದ್ದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.

ಈ ಹೈ ಪ್ರೊಪೈಲ್ ಸಮಾರಂಭದಿಂದ ಮಾತ್ರ ಕವಿತಾ ದೂರ ಉಳಿದಿಲ್ಲ. ಮುಂಬರುವ ಮುನುಗೊಡು ಉಪ ಚುನಾವಣೆಯ ಉಸ್ತುವಾರಿ ಪಟ್ಟಿಯಿಂದಲೂ ಅವರ ಹೆಸರನ್ನು ಕೈ ಬಿಡಲಾಗಿದೆ. ಇದು ಮತ್ತೆ ಕಣ್ಣು ಕೆಂಪಾಗುವಂತೆ ಮಾಡಿದೆ.

ಬುಧವಾರ ದಸರಾ ಹಬ್ಬದ ವೇಳೆ  ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಮತ್ತು ಕರ್ನಾಟಕದ ಜೆಡಿಎಸ್ ಮೂಲಕ ಬೆಂಬಲದೊಂದಿಗೆ  ಕೆಸಿಆರ್, ಬಿಎಸ್ ಆರ್ ರಾಷ್ಟ್ರೀಯ ಪಕ್ಷವನ್ನು ಘೋಷಿಸಿದರು.  ಹೊಸ ಪಕ್ಷ ಘೋಷಣೆ ದಿನ ಕವಿತಾ ಮನೆಯಲ್ಲಿದ್ದು ದಸರಾ ಆಚರಿಸಿರುವುದು ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸಿದೆ. ಶುಭ ಸಂದರ್ಭದಲ್ಲಿ ಮನೆಯಲ್ಲಿ ಆಯುಧ ಪೂಜೆ ನೆರವೇರಿಸಿದ್ದಾಗಿ ಕವಿತಾ ಟ್ವೀಟ್ ಮಾಡಿದ್ದರು.

ಹೊಸ ಪಕ್ಷ ಘೋಷಣೆ ಸಮಾರಂಭದಲ್ಲಿ ಕೆಟಿಆರ್ ಕೂಡಾ ಪಾಲ್ಗೊಂಡಿದ್ದರು ಆದರೆ, ಕವಿತಾ ಟಿಆರ್ ಎಸ್ ಸಾಮಾನ್ಯ ಸಭೆ ಹಾಗೂ ಬಿಆರ್ ಎಸ್ ಘೋಷಣಾ ಸಮಾರಂಭದಿಂದ ದೂರ ಉಳಿದಿರುವ ಬಗ್ಗೆ ಬಿಜೆಪಿಯ ಕೆಲ ಮುಖಂಡರು ಅನುಮಾನ ವ್ಯಕ್ತಪಡಿಸುತ್ತಿರುವಂತೆಯೇ, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರಶ್ನೆ ಮಾಡಲಾಗುತ್ತಿದೆ.

ಈ ಕುರಿತು ಕವಿತಾ ಅವರ ಕಚೇರಿ ಹಾಗೂ ಟಿಆರ್ ಎಸ್ ಮುಖಂಡರು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು ಎಂದು ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ. 

SCROLL FOR NEXT