ಕೊಲೆಯಾದ ಯುವತಿ 
ದೇಶ

ಚೆನ್ನೈ: ಕಾಲೇಜು ವಿದ್ಯಾರ್ಥಿನಿಯನ್ನು ಚಲಿಸುತ್ತಿದ್ದ ರೈಲಿನ ಮುಂದೆ ತಳ್ಳಿ ಕೊಂದ ಪಾಗಲ್ ಪ್ರೇಮಿ

ಯುವಕನೊಬ್ಬ ಸೇಂಟ್ ಥಾಮಸ್ ಮೌಂಟ್ ರೈಲ್ವೇ ನಿಲ್ದಾಣದಲ್ಲಿ 20 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು ಚಲಿಸುತ್ತಿದ್ದ ರೈಲಿನ ಮುಂದೆ ತಳ್ಳಿ ಕೊಂದ ದಾರುಣ ಘಟನೆ ಗುರುವಾರ ನಡೆದಿದೆ.

ಚೆನ್ನೈ: ಯುವಕನೊಬ್ಬ ಸೇಂಟ್ ಥಾಮಸ್ ಮೌಂಟ್ ರೈಲ್ವೇ ನಿಲ್ದಾಣದಲ್ಲಿ 20 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು ಚಲಿಸುತ್ತಿದ್ದ ರೈಲಿನ ಮುಂದೆ ತಳ್ಳಿ ಕೊಂದ ದಾರುಣ ಘಟನೆ ಗುರುವಾರ ನಡೆದಿದೆ.

ಕಾಲೇಜು ವಿದ್ಯಾರ್ಥಿನಿ ಚೆನ್ನೈ ಬೀಚ್‌ಗೆ ಹೋಗುವ ರೈಲು ಹತ್ತಲು ಕಾಯುತ್ತಿದ್ದಾಗ 23 ವರ್ಷದ ಆರೋಪಿ ಆಕೆಯನ್ನು ರೈಲು ಬರುತ್ತಿದ್ದ ವೇಳೆ ತಳ್ಳಿದ್ದಾನೆ. ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ ಆರೋಪಿಯನ್ನು ಆಲಂದೂರಿನ ಡಿ ಸತೀಶ್ ಎಂದು ಗುರುತಿಸಲಾಗಿದ್ದು, ಆರೋಪಿ ತಂದೆ ದಯಾಳನ್ ನಿವೃತ್ತ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿದ್ದಾರೆ.

ಮೃತ ಕಾಲೇಜು ವಿದ್ಯಾರ್ಥಿನಿ ಆಲಂದೂರಿನ ಎಂ ಸತ್ಯ ಎಂದು ಗುರುತಿಸಲಾಗಿದ್ದು, ಈ ಯುವತಿಯನ್ನು ಸತೀಶ್ ಒನ್‌ಸೈಡ್‌ ಲವ್‌ ಮಾಡುತ್ತಿದ್ದ ಎನ್ನಲಾಗಿದೆ.

ಕಳೆದ ತಿಂಗಳು ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿ ಸತ್ಯ ಸಹ ಪೊಲೀಸ್ ಸಿಬ್ಬಂದಿ ಕುಟುಂಬದಿಂದ ಬಂದವರು.

ಆಕೆಯ ತಾಯಿ ಎಂ ರಾಜಲಕ್ಷ್ಮಿ ಆಡಂಬಕ್ಕಂ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿದ್ದಾರೆ. ಸತ್ಯಾ ಅವರ ತಾಯಿಯ ಸಹೋದರಿ, ಅವರ ತಾಯಿಯ ಚಿಕ್ಕಪ್ಪ ಮತ್ತು ಅವರ ಚಿಕ್ಕಮ್ಮ ಎಲ್ಲರೂ ನಗರ ಪೊಲೀಸ್‌ನ ವಿವಿಧ ವಿಭಾಗಗಳಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

LS Debate: ದೇಶದ ಯುವಶಕ್ತಿಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬೆಚ್ಚಿಬಿದ್ದಿದೆ: ಸಂಸದೆ ಪ್ರಿಯಾಂಕಾ ವಾದ್ರಾ

'ನನ್ನ ಕಾಲುಗಳು ನಡುಗುತ್ತಿದ್ದವು'; ಕ್ಯಾರವಾನ್‌ಗೆ ನುಗ್ಗಿ ಶರ್ಟ್ ಬಿಚ್ಚಿದ...: ಆಘಾತಕಾರಿ ಅನುಭವ ಬಿಚ್ಚಿಟ್ಟ ನಟಿ Kajal Aggarwal

Video: ಕರ್ನಾಟಕದಲ್ಲಿ 'ಕನ್ನಡಿಗ'ನಿಗೇ ಜಾಗ ಇಲ್ಲವೇ? BMTC ಬಸ್ಸಿನ ಮೇಲೆ ಅಂಟಿಸಿದ್ದ ಸ್ಟಿಕರ್ ತೆರವು ಖಂಡಿಸಿದ JDS

5 ವಿಕೆಟ್‌, 0 ರನ್‌: ಜಸ್ಟಿನ್ ಗ್ರೀವ್ಸ್ ಮಾರಕ ದಾಳಿಗೆ ಪಾಕಿಸ್ತಾನ ತತ್ತರ; ಹೊಸ ವಿಶ್ವದಾಖಲೆ ಬರೆದ ವಿಂಡೀಸ್ ವೇಗಿ! Video

LS Debate: ಸರ್ಕಾರ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದು, ತತ್ತರಿಸಿ ಹೋಗಿದೆ- ಅಖಿಲೇಶ್ ಯಾದವ್