ದೇಶ

ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 107ನೇ ಸ್ಥಾನಕ್ಕೆ ಕುಸಿದ ಭಾರತ: ದೋಷಪೂರಿತ, ಅವೈಜ್ಞಾನಿಕ ಮಾನದಂಡ- ಕೇಂದ್ರ ಸರ್ಕಾರ

Nagaraja AB

ನವದೆಹಲಿ: ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು 107 ನೇ ಸ್ಥಾನದಲ್ಲಿರುವುದು ಜನರಿಗೆ ಆಹಾರ ಭದ್ರತೆ ಮತ್ತು ಅದರ ಪೌಷ್ಟಿಕಾಂಶದ ಅವಶ್ಯಕತೆಗಳನ್ನು ಪೂರೈಸದ ರಾಷ್ಟ್ರ ಎಂಬ ದೇಶದ ವರ್ಚಸ್ಸನ್ನು ಕಳಂಕಗೊಳಿಸುವ ನಿರಂತರ ಪ್ರಯತ್ನದ ಭಾಗವಾಗಿದೆ ಎಂದು ಕೇಂದ್ರ ಸರ್ಕಾರ ಶನಿವಾರ ಹೇಳಿದೆ. ಹಸಿವು ಸೂಚ್ಯಂಕ ದೋಷಪೂರಿತ ಮಾನದಂಡವಾಗಿದೆ ಎಂದು ಎಂದು ಸರ್ಕಾರ ಪ್ರತಿಪಾದಿಸಿದೆ. 

2022 ಜುಲೈನಲ್ಲಿ ಮಾಡಲಾದ ( ಆಹಾರ ಅಭದ್ರತೆಯ ಅನುಭವದ ಮಟ್ಟ  ಸರ್ವೇ  FIES) ಅಂದಾಜನ್ನು ಬಳಸದಂತೆ ಆಹಾರ ಮತ್ತು ಕೃಷಿ ಸಂಸ್ಥೆಯೊಂದಿಗೆ ವಿಷಯವನ್ನು ಹೇಳಲಾಗಿತ್ತು. ಆದರೆ, ವಾಸ್ತವಿಕ ಪರಿಗಣನೆಗಳನ್ನು ಲೆಕ್ಕಿಸದೆ ಜಾಗತಿಕ ಹಸಿವು ಸೂಚ್ಯಂಕ ವರದಿಯನ್ನು ಪ್ರಕಟಿಸಿರುವುದು ವಿಷಾದನೀಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ  ಸಚಿವಾಲಯ ಹೇಳಿದೆ.

ಜಾಗತಿಕ ಹಸಿವಿನ ಸೂಚ್ಯಂಕ 2022 ರಲ್ಲಿ ಭಾರತವು 121 ದೇಶಗಳಲ್ಲಿ 107 ನೇ ಸ್ಥಾನದಲ್ಲಿದೆ, ಅದರ ಮಕ್ಕಳ ಕ್ಷೀಣತೆ ಪ್ರಮಾಣ ಶೇ. 19.3 ರಷ್ಟಿದೆ.ಇದು ವಿಶ್ವದಲ್ಲೇ ಅತ್ಯಧಿಕವಾಗಿದೆ. ಜನರಿಗೆ ಆಹಾರ ಭದ್ರತೆ ಮತ್ತು ಪೌಷ್ಟಿಕಾಂಶದ ಅವಶ್ಯಕತೆಗಳನ್ನು ಪೂರೈಸದ ರಾಷ್ಟ್ರವಾಗಿ ಭಾರತದ ವರ್ಚಸ್ಸಿಗೆ ಕಳಂಕ ತರುವ ಸತತ ಪ್ರಯತ್ನ ಮತ್ತೊಮ್ಮೆ ಗೋಚರಿಸುತ್ತಿದೆ. ತಪ್ಪು ಮಾಹಿತಿಯು ಜಾಗತಿಕ ಹಸಿವಿನ ಸೂಚ್ಯಂಕದ ವಿಶಿಷ್ಟ ಲಕ್ಷಣವಾಗಿದೆ ಎಂದು ಸಚಿವಾಲಯ ಹೇಳಿದೆ.

ಐರಿಶ್ ಸಂಸ್ಥೆ ಕನ್ಸರ್ನ್ ವರ್ಲ್ಡ್‌ವೈಡ್ ಮತ್ತು ಜರ್ಮನ್ ಸಂಸ್ಥೆ ವೆಲ್ಟ್ ಹಂಗರ್ ಹಿಲ್ಫ್  ಬಿಡುಗಡೆ ಮಾಡಿದ ಜಾಗತಿಕ ಹಸಿವಿನ ಸೂಚ್ಯಂಕ 2022 ರ ಪ್ರಕಾರ 121 ರಾಷ್ಟ್ರಗಳ ಪೈಕಿ ಭಾರತ 107ನೇ ಸ್ಥಾನದಲ್ಲಿದೆ. ಈ ಸೂಚ್ಯಂಕದ ಮಾನದಂಡ ಸರಿಯಾಗಿಲ್ಲ ಎಂದು ಸಚಿವಾಲಯ ತಿಳಿಸಿದೆ. ಸೂಚ್ಯಂಕ  ಲೆಕ್ಕಾಚಾರ ಮಾಡಲು ಬಳಸುವ ನಾಲ್ಕು ಸೂಚಕಗಳಲಲಿ ಮೂರು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿವೆ ಮತ್ತು ಇಡೀ ಜನಸಂಖ್ಯೆಯ ಪ್ರತಿನಿಧಿಯಾಗಿರಲು ಸಾಧ್ಯವಿಲ್ಲ ಎಂದು ಕೇಂದ್ರ ಹೇಳಿದೆ.

SCROLL FOR NEXT