ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಅನಿಮೇಷನ್ ವಿಡಿಯೋ ಮೂಲಕ ರಾಹುಲ್ ಗಾಂಧಿ ಲೇವಡಿ ಮಾಡಿದ ಬಿಜೆಪಿ; ಹತಾಶೆ ಎಂದ ಕಾಂಗ್ರೆಸ್

ಭಾರತ್ ಜೋಡೋ ಯಾತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ವಾಕ್ಸಮರ ನಡೆಯುತ್ತಿದ್ದು, ಭಾನುವಾರ ರಾಹುಲ್ ಗಾಂಧಿಯವರ ಅನಿಮೇಷನ್ ವಿಡಿಯೋವೊಂದನ್ನು ಕೇಸರಿ ಪಕ್ಷ ಬಿಡುಗಡೆ ಮಾಡಿದೆ.

ಅನಿಮೇಷನ್
Lingaraj Badiger
Updated On : 16 Oct 2022, 9:29 pm

ನವದೆಹಲಿ: ಭಾರತ್ ಜೋಡೋ ಯಾತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ವಾಕ್ಸಮರ ನಡೆಯುತ್ತಿದ್ದು, ಭಾನುವಾರ ರಾಹುಲ್ ಗಾಂಧಿಯವರ ಅನಿಮೇಷನ್ ವಿಡಿಯೋವೊಂದನ್ನು ಕೇಸರಿ ಪಕ್ಷ ಬಿಡುಗಡೆ ಮಾಡಿದೆ.

ಬಿಜೆಪಿಯು ರಾಹುಲ್ ಗಾಂಧಿಯ ಎರಡು ನಿಮಿಷಗಳ ಅವಧಿಯ ಅನಿಮೇಷನ್ ವಿಡಿಯೋ ಟ್ವಿಟ್ ಮಾಡಿದ್ದು, ಅದರಲ್ಲಿ ಗೋವಾದಲ್ಲಿ ಕಾಂಗ್ರೆಸ್ ಶಾಸಕರು ಪಕ್ಷ ತೊರೆಯುವುದು, ಗುಲಾಂ ನಬಿ ಆಜಾದ್ ಅವರ ರಾಜೀನಾಮೆ, ರಾಜಸ್ಥಾನ ಬಂಡಾಯದ ಸೇರಿದಂತೆ ಕಾಂಗ್ರೆಸ್ ಎದುರಿಸಿದ ಇತ್ತೀಚಿನ ಸಮಸ್ಯೆಗಳನ್ನು ಸೇರಿಸಲಾಗಿದೆ. 

ಈ ವಿಡಂಬನೆಯ ವಿಡಿಯೊದಲ್ಲಿ ಕೊನೆಗೆ ಸೋನಿಯಾ ಗಾಂಧಿ ಅವರನ್ನೂ ತೋರಿಸಲಾಗಿದೆ. “ಅಮ್ಮಾ, ಕೆಟ್ಟ ದಿನಗಳು ಏಕೆ ಕೊನೆಗೊಳ್ಳುವುದಿಲ್ಲ? ಖತಮ್…ಟಾಟಾ…ಗುಡ್ ಬೈ” ಎಂಬ ಶೀರ್ಷಿಕೆಯೊಂದಿಗೆ ಬಿಜೆಪಿ ಈ ವಿಡಿಯೋ ಶೇರ್ ಮಾಡಿದೆ.

Advertisement

Advertisement

ಇದನ್ನು ಓದಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ಬಳ್ಳಾರಿಯಲ್ಲಿ ಮತ ಚಲಾಯಿಸಲಿದ್ದಾರೆ ರಾಹುಲ್ ಗಾಂಧಿ

ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಭಾರತ್ ಜೋಡೋ ಯಾತ್ರೆಯ ಯಶಸ್ಸನ್ನು ಎದುರಿಸಲು ಬಿಜೆಪಿ ಬಳಸಿದ ಹೊಸ ತಂತ್ರ ಇದು ಎಂದಿದ್ದಾರೆ.

ಹತಾಶೆ + ಹತಾಶೆ = ಅನಿಮೇಷನ್ ಎಂದು ಜೈರಾಮ್ ರಮೇಶ್ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement