ಸಾಂದರ್ಭಿಕ ಚಿತ್ರ 
ದೇಶ

ಕಾಶ್ಮೀರದಲ್ಲಿ ಅಮಾಯಕರ ಹತ್ಯೆ, ಆಕ್ರೋಶಿತ ಜನರಿಂದ ಹುರಿಯತ್ ಕಾನ್ಫರೆನ್ಸ್ ಕಚೇರಿಗೆ ಹಾನಿ

ಕೇಂದ್ರಾಡಳಿತ ಪ್ರದೇಶ ಕಾಶ್ಮೀರದಲ್ಲಿ ಇತ್ತೀಚಿಗಿನ ಅಮಾಯಕರ ಹತ್ಯೆಯಿಂದ ಆಕ್ರೋಶಗೊಂಡ ಕೆಲವು ಸಾಮಾಜಿಕ ಕಾರ್ಯಕರ್ತರು ಸೋಮವಾರ ಪ್ರತ್ಯೇಕತವಾದಿ ಹುರಿಯತ್ ಕಾನ್ಫರೆನ್ಸ್ ನ ಕಚೇರಿಯನ್ನು ಹಾನಿಗೊಳಿಸಿದ್ದಾರೆ.

ಶ್ರೀನಗರ: ಕೇಂದ್ರಾಡಳಿತ ಪ್ರದೇಶ ಕಾಶ್ಮೀರದಲ್ಲಿ ಇತ್ತೀಚಿಗಿನ ಅಮಾಯಕರ ಹತ್ಯೆಯಿಂದ ಆಕ್ರೋಶಗೊಂಡ ಕೆಲವು ಸಾಮಾಜಿಕ ಕಾರ್ಯಕರ್ತರು ಸೋಮವಾರ ಪ್ರತ್ಯೇಕತವಾದಿ ಹುರಿಯತ್ ಕಾನ್ಫರೆನ್ಸ್ ನ ಕಚೇರಿಯನ್ನು ಹಾನಿಗೊಳಿಸಿದ್ದಾರೆ.

ರಾಜ್ ಭಾಗ್ ಪ್ರದೇಶದಲ್ಲಿರುವ ಪ್ರತ್ಯೇಕತವಾದಿ ಹುರಿಯತ್ ಕಾನ್ಫರೆನ್ಸ್ ಕಚೇರಿ ಹೊರಗಡೆ ಜಮಾಯಿಸಿದ್ದ ಸಾಮಾಜಿಕ ಕಾರ್ಯಕರ್ತರ ಗುಂಪು, ಹುರಿಯತ್ ಮುಖಂಡರು ಕಳೆದ 30 ವರ್ಷಗಳಿಂದ ಜನರನ್ನು ವಂಚಿಸುತ್ತಿದ್ದಾರೆ. ಕಾಶ್ಮೀರದಲ್ಲಿನ ಅಮಾಯಕರ ಹತ್ಯೆಗೆ ಅವರೇ ಹೊಣೆಗಾರರು ಎಂದು ಆರೋಪಿಸಿದರು. ಹುರಿಯತ್ ಕಾನ್ಫರೆನ್ಸ್ ಕಚೇರಿ ಮೇಲಿದ್ದ ನಾಮಫಲಕವನ್ನು ಕಿತ್ತೊಗೆದರು.

ಹುರಿಯತ್ ಕಾನ್ಫರೆನ್ಸ್ ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸಲು ನಿಂತಿರುವ ಪ್ರತ್ಯೇಕತಾವಾದಿ ಪಕ್ಷಗಳ ಒಕ್ಕೂಟವಾಗಿದೆ. ಸ್ವತಂತ್ರ ರಾಜ್ಯವನ್ನು ಬಯಸುತ್ತಾರೆಯೇ ಅಥವಾ ಪಾಕಿಸ್ತಾನದೊಂದಿಗೆ ವಿಲೀನಗೊಳಿಸುತ್ತಾರೆಯೇ ಎಂಬ ಬಗ್ಗೆ ಹುರಿಯತ್ ಮುಖಂಡರ ನಡುವೆ ಭಿನ್ನಾಭಿಪ್ರಾಯವಿದೆ.

ಈ ಭಿನ್ನಾಭಿಪ್ರಾಯದಿಂದಾಗಿ ಅಂತಿಮ ದಿವಂಗತ ಸೈಯದ್ ಆಲಿ ಗಿಲಾನಿ ಮತ್ತು ಮಿವೈಜ್ ಉಮರ್ ಫಾರೂಖ್ ನೇತೃತ್ವದಲ್ಲಿ ಎರಡು ಬಣಗಳಾಗಿ ಹುರಿಯತ್ ಕಾನ್ಫರೆನ್ಸ್ ವಿಭಜನೆಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

SCROLL FOR NEXT