ದೇಶ

ಹಿಂದಿ ಭಾಷೆಯಲ್ಲಿ ವೈದ್ಯಕೀಯ ಶಿಕ್ಷಣ ದೊಡ್ಡ ಧನಾತ್ಮಕ ಬದಲಾವಣೆ ತರಲಿದೆ: ಪ್ರಧಾನಿ ಮೋದಿ

Sumana Upadhyaya

ನವದೆಹಲಿ: ವೈದ್ಯಕೀಯ ಶಿಕ್ಷಣವನ್ನು ಹಿಂದಿ ಭಾಷೆಯಲ್ಲಿ ಆರಂಭಿಸುವ ಮಧ್ಯ ಪ್ರದೇಶ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ ಇದು ಧನಾತ್ಮಕ ಬದಲಾವಣೆಯನ್ನು ತರಲಿದೆ ಎಂದು ಹೇಳಿದ್ದಾರೆ.

ಎಂಬಿಬಿಎಸ್ ವಿದ್ಯಾರ್ಥಿಗಳ ಮೂರು ವಿಷಯಗಳನ್ನು ಹಿಂದಿಯಲ್ಲಿ ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಡುಗಡೆ ಮಾಡಿದ್ದರು. ಇದು ಮಧ್ಯ ಪ್ರದೇಶ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾಗಿದೆ.

ಇದು ಭಾರತದ ಇತಿಹಾಸದಲ್ಲಿ ಅತ್ಯಂತ ಮುಖ್ಯವಾದ ದಿನ ಎಂದು ಬಣ್ಣಿಸಿದ್ದ ಅಮಿತ್ ಶಾ, ಎಂಬಿಬಿಎಸ್ ಕೋರ್ಸ್ ಗಳನ್ನು ಹಿಂದಿ ಭಾಷೆಯಲ್ಲಿ ಕಲಿಸುವ ದೇಶದ ಮೊದಲ ರಾಜ್ಯ ಮಧ್ಯ ಪ್ರದೇಶ ಎಂದು ಹೇಳಿದ್ದರು. ಅಮಿತ್ ಶಾ ಅವರ ಟ್ವೀಟ್ ನ್ನು ಟ್ಯಾಗ್ ಮಾಡಿದ್ದ ಮೋದಿ, ಇದು ದೇಶದ ವೈದ್ಯಕೀಯ ಶಿಕ್ಷಣದಲ್ಲಿ ಮಹತ್ತರ ಬದಲಾವಣೆಯನ್ನು ಕಾಣಲಿದೆ ಎಂದಿದ್ದರು.

ಈ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯಲ್ಲಿ ಕಲಿಯಬಹುದು. ಹಲವು ಅವಕಾಶಗಳ ಆಗರ ಅವರನ್ನು ತೆರೆಯಲಿದೆ ಎಂದು ಪ್ರಧಾನಿ ಹೇಳಿದ್ದಾರೆ. 

ಭೋಪಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಅಮಿತ್ ಶಾ, ಮಧ್ಯ ಪ್ರದೇಶ ಸರ್ಕಾರ ವೈದ್ಯಕೀಯ ಶಿಕ್ಷಣ ಕೋರ್ಸ್ ನಲ್ಲಿ ಹಿಂದಿ ಭಾಷೆಯನ್ನು ಅಳವಡಿಸಿಕೊಳ್ಳುವ ಮೂಲಕ ಪ್ರಧಾನಿ ಮೋದಿಯವರ ಕನಸನ್ನು ನನಸು ಮಾಡುತ್ತಿದೆ. ಈ ಕ್ಷಣ ಶಿಕ್ಷಣ ವಲಯದ ಪುನರುಜ್ಜೀವನವಾಗಿದ್ದು ಇದಕ್ಕಾಗಿ ಪ್ರಧಾನ ಮಂತ್ರಿಯವರನ್ನು ಅಭಿನಂದಿಸುತ್ತೇನೆ ಎಂದಿದ್ದರು.

SCROLL FOR NEXT