ಬಾಬಾ ರಾಮದೇವ್ 
ದೇಶ

ಸಲ್ಮಾನ್ ಖಾನ್, ಶಾರುಖ್ ಮಗ ಇಬ್ಬರೂ ಡ್ರಗ್ಸ್ ಸೇವಿಸುತ್ತಾರೆ; ಬಾಬಾ ರಾಮ್‌ದೇವ್ ಹೇಳಿಕೆ

ಯೋಗ ಗುರು ಬಾಬಾ ರಾಮ್‌ದೇವ್ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಮತ್ತು ಶಾರುಖ್ ಪುತ್ರ ಆರ್ಯನ್ ಖಾನ್ ವಿರುದ್ಧ ಡ್ರಗ್ಸ್ ಸೇವಿಸುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಮೊರಾದಾಬಾದ್‌: ಯೋಗ ಗುರು ಬಾಬಾ ರಾಮ್‌ದೇವ್ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಮತ್ತು ಶಾರುಖ್ ಪುತ್ರ ಆರ್ಯನ್ ಖಾನ್ ವಿರುದ್ಧ ಡ್ರಗ್ಸ್ ಸೇವಿಸುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.  

ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಇತ್ತೀಚಿಗೆ ನಡೆದ ಆರ್ಯವೀರ್ ಮತ್ತು ವೀರಾಂಗನಾ ಸಮಾವೇಶದಲ್ಲಿ ಮಾತನಾಡಿದ ಯೋಗ ಗುರು ಬಾಬಾ ರಾಮ್‌ದೇವ್ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಮತ್ತು ಶಾರುಖ್ ಪುತ್ರ ಆರ್ಯನ್ ಖಾನ್ ವಿರುದ್ಧ ಡ್ರಗ್ಸ್ ಸೇವಿಸುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.  

ಬಾಬಾ ರಾಮ್‌ದೇವ್ ಡ್ರಗ್ಸ್ ಮುಕ್ತ ದೇಶದ ಬಗ್ಗೆ ಮಾತನಾಡುತ್ತಾ ಹಲವಾರು ಬಾಲಿವುಡ್ ತಾರೆಯರನ್ನು ತರಾಟೆ ತೆಗೆದುಕೊಂಡರು. ಸಲ್ಮಾನ್ ಖಾನ್ ಡ್ರಗ್ಸ್ ಸೇವಿಸುತ್ತಾರೆ, ಆದರೆ ಆಮೀರ್ ಖಾನ್ ಬಗ್ಗೆ ತನಗೆ ಖಚಿತ ಮಾಹಿತಿ ಇಲ್ಲ ಎಂದು ಹೇಳಿದರು.

ರಾಮ್​ದೇವ್ ಆರೋಪ ಇಷ್ಟಕ್ಕೆ ಮುಗಿದಿಲ್ಲ. ‘ಸಿನಿಮಾ ರಂಗದಲ್ಲಿ ಡ್ರಗ್ಸ್ ಇದೆ. ರಾಜಕೀಯದಲ್ಲೂ ಇದೆ. ಚುನಾವಣೆ ಸಂದರ್ಭದಲ್ಲಿ ಮದ್ಯ ಪೂರೈಕೆ ಆಗುತ್ತದೆ. ನಾವು ಮಾದಕ ದ್ರವ್ಯ ಮುಕ್ತ ಭಾರತವನ್ನು ಸೃಷ್ಟಿ ಮಾಡಲು ಕ್ರಾಂತಿ ಹುಟ್ಟು ಹಾಕಬೇಕು. ಇದಕ್ಕಾಗಿ ನಾವು ಆಂದೋಲನ ಆರಂಭಿಸುತ್ತಿದ್ದೇವೆ’ ಎಂದಿದ್ದಾರೆ ರಾಮ್​ದೇವ್​.

ಬಾಬಾ ರಾಮ್‌ದೇವ್ ಮಾತಿನಲ್ಲಿ, ಸಲ್ಮಾನ್ ಖಾನ್ ಡ್ರಗ್ಸ್ ಸೇವಿಸುತ್ತಾರೆ. ಆದರೆ ಆಮೀರ್ ಖಾನ್ ಪುತ್ರನ ಬಗ್ಗೆ ನನಗೆ ಗೊತ್ತಿಲ್ಲ. ಶಾರುಖ್ ಖಾನ್ ಪುತ್ರ ಕೂಡ ಡ್ರಗ್ಸ್ ಸೇವಿಸಿ ಜೈಲು ಸೇರಿದ್ದರು. ಇನ್ನು ನಟಿಯರ ಬಗ್ಗೆ ಹೇಳುವುದಾದರೆ ಅವರ ಬಗ್ಗೆ ದೇವರಿಗೆ ಗೊತ್ತು' ಎಂದು ನೇರವಾಗಿ ಆರೋಪ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಂಬಿಕೆಯೇ ಭಾರತದ ಬಲಿಷ್ಠ ಕರೆನ್ಸಿ: ಮಲೇಷ್ಯಾದಲ್ಲಿ ಪ್ರಧಾನಿ ಮೋದಿ

T20 ವಿಶ್ವಕಪ್ 2026: ಮಕಾಡೆ ಮಲಗಿದ USA ಬ್ಯಾಟಿಂಗ್; ಭಾರತಕ್ಕೆ ಭರ್ಜರಿ ಜಯ, ಶುಭಾರಂಭ!

T20 ವಿಶ್ವಕಪ್ 2026: USA ವಿರುದ್ಧ ಸೂರ್ಯ ಭರ್ಜರಿ ಬ್ಯಾಟಿಂಗ್; Babar Azam ದಾಖಲೆ ಧ್ವಂಸ

T20 ವಿಶ್ವಕಪ್ 2026: ಕೊನೆಗೂ Virat Kohli ದಾಖಲೆ ಮುರಿದ ಸೂರ್ಯ ಕುಮಾರ್ ಯಾದವ್!

T20 ವಿಶ್ವಕಪ್ 2026: ಅಮೆರಿಕ ವಿರುದ್ಧ ಗೋಲ್ಡನ್ ಡಕೌಟ್; ಕಳಪೆ ದಾಖಲೆ ಬರೆದ Abhishek Sharma!

SCROLL FOR NEXT