ದೇಶ

ಹೊಸ ತಲೆಮಾರಿನ ಖಂಡಾಂತರ ಕ್ಷಿಪಣಿ, ಅಗ್ನಿ ಪ್ರೈಮ್ ಪರೀಕ್ಷೆ ಯಶಸ್ವಿ

Srinivasamurthy VN

ಬಾಲಾಸೋರ್: ಹೊಸ ತಲೆಮಾರಿನ ಖಂಡಾಂತರ ಕ್ಷಿಪಣಿ 'ಅಗ್ನಿ ಪ್ರೈಮ್' ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಹೇಳಿದೆ.

ಅಗ್ನಿ ಪ್ರೈಮ್ ಹೊಸ ತಲೆಮಾರಿನ ಖಂಡಾಂತರ ಕ್ಷಿಪಣಿಯಾಗಿದ್ದು, ಇದನ್ನು ಇಂದು 0945 ಗಂಟೆಯ ಸುಮಾರಿಗೆ ಒಡಿಶಾ ಕರಾವಳಿಯಲ್ಲಿ ಭಾರತ ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಪರೀಕ್ಷಾರ್ಥ ಹಾರಾಟದ ಸಮಯದಲ್ಲಿ, ಕ್ಷಿಪಣಿಯು ಗರಿಷ್ಠ ವ್ಯಾಪ್ತಿಯನ್ನು ಪ್ರಯಾಣಿಸಿದ್ದು, ಮತ್ತು ಎಲ್ಲಾ ಪರೀಕ್ಷಾ ಉದ್ದೇಶಗಳನ್ನು ಯಶಸ್ವಿಯಾಗಿ ಪೂರೈಸಿದೆ. ಅಗ್ನಿ ಪ್ರೈಮ್ ಕ್ಷಿಪಣಿಯ ಈ ಸತತ ಮೂರನೇ ಬಾರಿಗೆ ಯಶಸ್ವಿ ಹಾರಾಟ ಪರೀಕ್ಷೆಯೊಂದಿಗೆ, ವ್ಯವಸ್ಥೆಯ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಸ್ಥಾಪಿಸಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ರಾಡಾರ್, ಟೆಲಿಮೆಟ್ರಿ ಮತ್ತು ಎಲೆಕ್ಟ್ರೋ ಆಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್‌ಗಳಂತಹ ಹಲವಾರು ಶ್ರೇಣಿಯ ಉಪಕರಣಗಳಿಂದ ಪಡೆದ ಡೇಟಾವನ್ನು ಬಳಸಿಕೊಂಡು ಅಗ್ನಿ ಪ್ರೈಮ್ ಕ್ಷಿಪಣಿಯ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಮೌಲ್ಯೀಕರಿಸಲಾಗಿದ್ದು ಸಂಪೂರ್ಣ ಪಥವನ್ನು ಕವರ್ ಮಾಡಲು ಟರ್ಮಿನಲ್ ಪಾಯಿಂಟ್‌ನಲ್ಲಿ ಎರಡು ಡೌನ್ ರೇಂಜ್ ಹಡಗುಗಳನ್ನು ಒಳಗೊಂಡಂತೆ ವಿವಿಧ ಸ್ಥಳಗಳಲ್ಲಿ ನಿಯೋಜಿಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 

SCROLL FOR NEXT