ದೇಶ

ತಮಿಳುನಾಡು ಕಾರು ಸ್ಫೋಟ ಪ್ರಕರಣ: ಬಂಧಿತ 5 ಮಂದಿ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ

Srinivas Rao BV

ಕೊಯಮತ್ತೂರು: ಕೊಯಮತ್ತೂರು ಕಾರ್ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಐವರು ವ್ಯಕ್ತಿಗಳ ವಿರುದ್ಧ ಕಠಿಣವಾದ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. 

ಸ್ಫೋಟದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದರು.  ಈ ಘಟನೆಗೆ ಸಂಬಂಧಿಸಿದಂತೆ ಭಯೋತ್ಪಾದನೆಯ ಆಯಾಮವೂ ಸೇರಿದಂತೆ ಎಲ್ಲಾ ಆಯಾಮಗಳಿಂದಲೂ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. 

ಬಂಧಿತರನ್ನು ಮುಹಮ್ಮದ್ ತಲ್ಕಾ, ಮುಹಮ್ಮದ್ ಅಜರುದ್ದೀನ್, ಮುಹಮ್ಮದ್ ರಿಯಾಜ್, ಫಿರೋಜ್ ಇಸ್ಮೈಲ್, ಮುಹಮ್ಮದ್ ನವಾಜ್ ಇಸ್ಮೈಲ್ ಎಂದು ಗುರುತಿಸಲಾಗಿದ್ದು ಎಲ್ಲರೂ 20 ವರ್ಷಗಳ ಆಸು ಪಾಸಿನ ವಯಸ್ಸಿನವರಾಗಿದ್ದಾರೆ. 

ಬಂಧಿತರ ಪೈಕಿ ಕೆಲವರನ್ನು ಎನ್ಐಎ 2019 ರಲ್ಲಿಯೂ ವಿಚಾರಣೆಗೆ ಒಳಪಡಿಸಿತ್ತು, ಆ ಬಳಿಕ ಪೊಲೀಸರೂ ಅವರ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸುತ್ತಿದ್ದರು ಎಂದು ನಗರ ಪೊಲೀಸ್ ಆಯುಕ್ತ ವಿ ಬಾಲಕೃಷ್ಣನ್ ಹೇಳಿದ್ದಾರೆ. 

ವ್ಯಕ್ತಿಗಳ ಬಂಧನಕ್ಕೆ ನಿರ್ದಿಷ್ಟ ಕಾರಣಗಳನ್ನು ಸ್ಪಷ್ಟಪಡಿಸದೇ, ಸೆಕ್ಷನ್ ಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸದೇ ಇರುವ ಕ್ರಮವನ್ನು ತಮಿಳುನಾಡಿನ ಬಿಜೆಪಿ ಪ್ರಶ್ನಿಸಿದ್ದ ಬೆನ್ನಲ್ಲೇ ಪೊಲೀಸ್ ಆಯುಕ್ತ ವಿ ಬಾಲಕೃಷ್ಣನ್ ಸ್ಪಷ್ಟನೆ ನೀಡಿದ್ದು, ಬಂಧಿತರ ವಿರುದ್ಧ ಯುಎಪಿಎ ಹಾಗೂ ಪಿತೂರಿಯೇ ಮೊದಲಾದ ಇನ್ನಿತರ ಐಪಿಸಿ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
 
 

SCROLL FOR NEXT