ಆಗಸ್ಟಾ ಹೆಲಿಕಾಪ್ಟರ್ (ಸಂಗ್ರಹ ಚಿತ್ರ) 
ದೇಶ

ಆಗಸ್ಟಾ ವೆಸ್ಟ್ ಲ್ಯಾಂಡ್ ಗೆ ಸಂಬಂಧಿಸಿದ ಪ್ರಕರಣ: ಸಾಕ್ಷ್ಯ ಇಲ್ಲದ ಕಾರಣ ಮಾಜಿ ಬ್ರಿಗೆಡಿಯರ್ ವಿರುದ್ಧ ಕೇಸ್ ಕೈಬಿಟ್ಟ ಸಿಬಿಐ

ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣಕ್ಕೆ ಸಂಬಂಧಿಸಿದ ಪ್ರಕರಣವೊಂಡರಲ್ಲಿ ಸಾಕ್ಷ್ಯ ಇಲ್ಲದ ಕಾರಣ ಸಿಬಿಐ ಮಾಜಿ ಬ್ರಿಗೆಡಿಯರ್ ವಿರುದ್ಧ ಇದ್ದ ಪ್ರಕರಣವನ್ನು ಕೈಬಿಟ್ಟಿದೆ.

ನವದೆಹಲಿ: ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣಕ್ಕೆ ಸಂಬಂಧಿಸಿದ ಪ್ರಕರಣವೊಂಡರಲ್ಲಿ ಸಾಕ್ಷ್ಯ ಇಲ್ಲದ ಕಾರಣ ಸಿಬಿಐ ಮಾಜಿ ಬ್ರಿಗೆಡಿಯರ್ ವಿರುದ್ಧ ಇದ್ದ ಪ್ರಕರಣವನ್ನು ಕೈಬಿಟ್ಟಿದೆ.

ಚಾಪರ್ ಹಗರಣದಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾದ 7 ವರ್ಷಗಳ ಬಳಿಕ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಪ್ರಕರಣ ಕೈಬಿಡುತ್ತಿರುವುದರ ಬಗ್ಗೆ ವರದಿ ನೀಡಿದ್ದು, 

"ಸಿಬಿಐ ಎಂದಿಗೂ ತನ್ನ ತನಿಖಾ ವಿಧಾನದಲ್ಲಿ ವೃತ್ತಿಪರತೆಯನ್ನು ಕಾಯ್ದುಕೊಂಡಿದೆ. ಎಂದಿಗೂ ಸಾಕ್ಷ್ಯ ಇಲ್ಲದೇ ಚಾರ್ಜ್ ಶೀಟ್ ಹಾಕುವುದಿಲ್ಲ" ಎಂದು ಪ್ರಕರಣವನ್ನು ಕೈಬಿಟ್ಟಿರುವ ಸಿಬಿಐ ಹೇಳಿದೆ.

ಬ್ರಿಗೆಡಿಯರ್ ವಿಎಸ್ ಸೈನಿ ವಿರುದ್ಧ ದಾಖಲಾಗಿದ್ದ ಪ್ರಕರಣ ಆಗಸ್ಟಾ ಕೇಸ್ ಗೆ ಸಂಬಂಧಪಟ್ಟಿದ್ದಾಗಿದ್ದು ಇಟಾಲಿಯಿಂದ ಲಭ್ಯವಾಗಿದ್ದ ದಾಖಲೆಗಳನ್ನು ಆಧರಿಸಿ ಸಿಬಿಐ 2014 ರಲ್ಲಿ ಹೊಸ ಪ್ರಕರಣ ದಾಖಲಿಸಿತ್ತು. ಹೊಸ ಕೇಸ್ ನ ಪ್ರಕಾರ ಬ್ರಿಗೆಡಿಯರ್ ವಿಎಸ್ ಸೈನಿ ಆಗಸ್ಟಾಗೆ ಸಹಾಯ ಮಾಡಲು 5 ಮಿಲಿಯನ್ ಯೂರೋಗಳ ಬೇಡಿಕೆ ಇಟ್ಟಿದ್ದರು ಎಂಬ ಆರೋಪವಿತ್ತು.

ಬ್ರಿಗೇಡಿಯರ್ ಸೈನಿ ಸರ್ಕಾರ ಖರೀದಿಸಬೇಕೆಂದಿದ್ದ  ಸರ್ವೇಕ್ಷಣೆ ಹಾಗೂ ವಿಚಕ್ಷಣ ಹೆಲಿಕಾಫ್ಟರ್ ಹಾರಾಟದ ಪ್ರಯೋಗವನ್ನು ತಪ್ಪಿಸಿದ್ದ ಆರೋಪ ಎದುರಿಸುತ್ತಿದ್ದರು.

ಸೈನಿ ಅವರಷ್ಟೇ ಅಲ್ಲದೇ ಎಫ್ಐಆರ್ ನಲ್ಲಿ ಇನ್ನಿತರ ಸೇನಾ ಅಧಿಕಾರಿಗಳು, ರಕ್ಷಣಾ ಸಚಿವಾಲಯದ ಅಧಿಕಾರಿಗಳು, ಖಾಸಗಿ ಸಂಸ್ಥೆಗಳ ಅಧಿಕಾರಿಗಳ ಹೆಸರೂ ಇತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT