ದೇಶ

ಮುಂಬರುವ ಗುಜರಾತ್, ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನಕ್ಕೆ ಖರ್ಗೆ ಬಲಿಪಶು?: ಬಿಜೆಪಿ

Ramyashree GN

ನವದೆಹಲಿ: ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ಅಧಿಕೃತವಾಗಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದು, ಮುಂಬರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಕಳಪೆ ಪ್ರದರ್ಶನ ನೀಡಿದರೆ ಅವರನ್ನು ಬಲಿಪಶು ಮಾಡಲಾಗುತ್ತದೆ ಎಂದು ಬಿಜೆಪಿ ದೂರಿದೆ.

ಹಿರಿಯ ಕಾಂಗ್ರೆಸ್ ನಾಯಕನ ಸ್ಥಾನಕ್ಕೇರುವುದು ಅವರ ಪಕ್ಷದ ಆಂತರಿಕ ವಿಷಯ ಎಂದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು ಸುದ್ದಿಗಾರರ ಪ್ರಶ್ನೆಗೆ ನೀಡಿದ ಉತ್ತರದಲ್ಲಿ, ಸೋನಿಯಾ ಗಾಂಧಿ ಮತ್ತು ರಾಹುಲ್ ವೇದಿಕೆಯಲ್ಲಿ ಖರ್ಗೆ ಅವರ ಎರಡು ಕಡೆ ಇರುವುದು ಪಕ್ಷದಲ್ಲಿನ ಕುಟುಂಬ ಆಡಳಿತವನ್ನು ಸೂಚಿಸುತ್ತದೆ ಎಂದರು.

ಬಿಜೆಪಿ ನೇತೃತ್ವದ ಸರ್ಕಾರದ ಅಡಿಯಲ್ಲಿ ಚಾಲ್ತಿಯಲ್ಲಿರುವ "ಸುಳ್ಳು ಮತ್ತು ದ್ವೇಷದ ವ್ಯವಸ್ಥೆಯನ್ನು" ಕಾಂಗ್ರೆಸ್ ಮುರಿಯಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಈ ಹಿಂದೆ ಹೇಳಿದ್ದರು.

24 ವರ್ಷಗಳಲ್ಲಿ ಪಕ್ಷದ ಮುಖ್ಯಸ್ಥರಾದ ಮೊದಲ ಗಾಂಧಿಯೇತರ ಖರ್ಗೆ ಅವರಾಗಿದ್ದು, ಗಾಂಧಿ ಕುಟುಂಬದವರು ಸ್ಪರ್ಧೆಯಿಂದ ಹೊರಗುಳಿದ ನಂತರ ನೇರ ಸ್ಪರ್ಧೆಯಲ್ಲಿ ಕೇರಳದ ಸಂಸದ ಶಶಿ ತರೂರ್ ಅವರನ್ನು ಸೋಲಿಸಿದರು.

ವಿರೋಧ ಪಕ್ಷದ ಅಧ್ಯಕ್ಷರಾದ ಬಳಿಕ ಅವರ ಮೊದಲ ಚುನಾವಣಾ ಪರೀಕ್ಷೆ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ನಡೆಯಲಿದೆ. ಮುಂಬರುವ ದಿನಗಳಲ್ಲಿ ಎರಡೂ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

ಸದ್ಯ ಎರಡೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಈ ಬಾರಿಯೂ ಪ್ರತಿಸ್ಪರ್ಧಿ ವಿರುದ್ಧ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದೆ.

SCROLL FOR NEXT