ರಾಜನಾಥ್ ಸಿಂಗ್ 
ದೇಶ

'ಕಾಶ್ಮೀರಿಯತ್‌' ಹೆಸರಿನಲ್ಲಿ ನಮ್ಮ ರಾಷ್ಟ್ರ ಕಂಡ ಭಯೋತ್ಪಾದನೆ, ರಕ್ತಪಾತ ವ್ಯಾಖ್ಯಾನಿಸಲು ಅಸಾಧ್ಯ: ರಾಜನಾಥ್ ಸಿಂಗ್

'ಕಾಶ್ಮೀರಿಯತ್‌'  ಹೆಸರಿನಲ್ಲಿ ರಾಷ್ಟ್ರ ಕಂಡ ಭಯೋತ್ಪಾದನೆ ಮತ್ತು ರಕ್ತಪಾತವನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು  ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.  

ಬುದ್ಗಾಮ್:  'ಕಾಶ್ಮೀರಿಯತ್‌'  ಹೆಸರಿನಲ್ಲಿ ರಾಷ್ಟ್ರ ಕಂಡ ಭಯೋತ್ಪಾದನೆ ಮತ್ತು ರಕ್ತಪಾತವನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು  ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.  

ಜಮ್ಮು-ಕಾಶ್ಮೀರದ ಬುದ್ಗಾಮ್ ನಲ್ಲಿಂದು  ಭಾರತೀಯ ಸೇನೆಯಿಂದ ಆಯೋಜಿಸಿದ್ದ 'ಶೌರ್ಯ ದಿವಸ್ 'ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಶ್ಮೀರಿಯತ್ ಹೆಸರಿನಲ್ಲಿ ಲೆಕ್ಕವಿಲ್ಲದಷ್ಟು ಜೀವಗಳು ಕಳೆದುಹೋದವು ಮತ್ತು ಲೆಕ್ಕವಿಲ್ಲದಷ್ಟು ಮನೆಗಳು ನಾಶವಾದವು. ಅನೇಕ ಜನರು ಭಯೋತ್ಪಾದನೆಯನ್ನು ಧರ್ಮದೊಂದಿಗೆ ಜೋಡಿಸಲು ಪ್ರಯತ್ನಿಸಿದರು ಎಂದು ತಿಳಿಸಿದರು.

ಭವಿಷ್ಯದಲ್ಲಿ ಎಂತಹ ಪರಿಸ್ಥಿತಿ ಬಂದರೂ ನಮ್ಮ ಮುಂದೆ ಎಷ್ಟೇ ವಿಭಜಕ ಶಕ್ತಿಗಳು ಬಂದರೂ ಅವರದೇ ಭಾಷೆಯಲ್ಲಿ ಉತ್ತರ ನೀಡುವ ಮೂಲಕ ನಮ್ಮ ದೇಶವನ್ನು ಎತ್ತರಕ್ಕೆ ಕೊಂಡೊಯ್ಯಬೇಕು ಎಂಬ ಸಂಕಲ್ಪವನ್ನು ಕೈಗೊಳ್ಳಲು ಈ ಶೌರ್ಯ ದಿವಸ್  ಪ್ರೇರೇಪಿಸುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT