ಪ್ರಧಾನಿ ನರೇಂದ್ರ ಮೋದಿ 
ದೇಶ

ಇದು 5ಜಿ ತಂತ್ರಜ್ಞಾನ ಯುಗ, ಅಪರಾಧ ಜಗತ್ತಿಗಿಂತ ನಾವು ಹತ್ತು ಹೆಜ್ಜೆ ಮುಂದೆ ಇರಬೇಕು: ಪ್ರಧಾನಿ ಮೋದಿ

ಸುಧಾರಿತ ತಂತ್ರಜ್ಞಾನಗಳಿಗೆ ಸಮನಾಗಿ ದೇಶದ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ಕಾನೂನು ಜಾರಿ ಸಂಸ್ಥೆಗಳು ದೇಶದ ಅಪರಾಧ ಜಗತ್ತಿಗಿಂತ ಹತ್ತು ಹೆಜ್ಜೆ ಮುಂದಿರಬೇಕು ಎಂದು ಒತ್ತಿ ಹೇಳಿದ್ದಾರೆ. 

ನವದೆಹಲಿ: ಸುಧಾರಿತ ತಂತ್ರಜ್ಞಾನಗಳಿಗೆ ಸಮನಾಗಿ ದೇಶದ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ಕಾನೂನು ಜಾರಿ ಸಂಸ್ಥೆಗಳು ದೇಶದ ಅಪರಾಧ ಜಗತ್ತಿಗಿಂತ ಹತ್ತು ಹೆಜ್ಜೆ ಮುಂದಿರಬೇಕು ಎಂದು ಒತ್ತಿ ಹೇಳಿದ್ದಾರೆ. 

ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯಗಳ ಗೃಹ ಸಚಿವರ ಚಿಂತನ್ ಶಿಬಿರವನ್ನು ಉದ್ದೇಶಿಸಿ ಮಾತನಾಡಿ, "ಇಂದು ಅಪರಾಧಗಳ ಸ್ವರೂಪ ಬದಲಾಗುತ್ತಿದೆ. ನಾವು ಹೊಸ ಯುಗದ ತಂತ್ರಜ್ಞಾನಗಳನ್ನು ಅರ್ಥಮಾಡಿಕೊಳ್ಳಬೇಕು. 5ಜಿ ಯುಗವನ್ನು ಪ್ರವೇಶಿಸುತ್ತಿರುವ ಸಂದರ್ಭದಲ್ಲಿ ಅಪರಾಧ ಜಗತ್ತಿನಲ್ಲಿ ಇನ್ನಷ್ಟು ಜಾಗರೂಕರಾಗಿರಬೇಕು. 

5ಜಿ ತಂತ್ರಜ್ಞಾನದೊಂದಿಗೆ, ಮುಖ ಗುರುತು ಪತ್ತೆಹಚ್ಚುವಿಕೆ ತಂತ್ರಜ್ಞಾನ, ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ ತಂತ್ರಜ್ಞಾನ, ಡ್ರೋನ್ ಮತ್ತು ಸಿಸಿಟಿವಿ ತಂತ್ರಜ್ಞಾನದಲ್ಲಿ ಹಲವು ಪಟ್ಟು ಸುಧಾರಣೆಯಾಗಲಿದೆ ಎಂದು ಹೇಳಿದರು.

"5G ತಂತ್ರಜ್ಞಾನದ ಪ್ರಗತಿಯೊಂದಿಗೆ, ಜಾಗೃತಿಯೂ ಅಷ್ಟೇ ಮುಖ್ಯ. ಭಾರತದ ಕಾನೂನು ಮತ್ತು ಸುವ್ಯವಸ್ಥೆ ವ್ಯವಸ್ಥೆಯು ಇನ್ನಷ್ಟು ಸ್ಮಾರ್ಟ್ ಆಗಬೇಕು. ತಂತ್ರಜ್ಞಾನವು ಅಪರಾಧಗಳನ್ನು ತಡೆಗಟ್ಟುವಲ್ಲಿ ಮಾತ್ರವಲ್ಲದೆ ಅಪರಾಧ ತನಿಖೆಯಲ್ಲಿಯೂ ಸಹಾಯ ಮಾಡುತ್ತದೆ. ಈ ನಿಟ್ಟಿನಲ್ಲಿ ಅಪರಾಧ ಜಗತ್ತಿನ ಆಳ ಅಗಲಗಳನ್ನು ತಿಳಿಯಲು ಇನ್ನೂ ಹತ್ತು ಪಟ್ಟು ಮುಂದೆ ಹೆಜ್ಜೆಯಿರಿಸಬೇಕು ಎಂದರು. 

ನಮ್ಮಲ್ಲಿ ಸಕಾರಾತ್ಮಕ ದೃಷ್ಟಿಕೋನದ ಅವಶ್ಯಕತೆಯಿದೆ. ಸಹಕಾರ, ಬಾಂಧವ್ಯ ಮತ್ತು ಸುವ್ಯವಸ್ಥಿತ ಕಾರ್ಯವಿಧಾನದೊಂದಿಗೆ ಪೊಲೀಸ್ ಠಾಣೆಗಳ ನಡುವೆ ಸುಧಾರಣೆಯಾಗಬೇಕು ಎಂದು ಕರೆನೀಡಿದರು. 

ಪೊಲೀಸರ ದಕ್ಷತೆಯನ್ನು ಸುಧಾರಿಸಲು ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸಲು, ವಿವಿಧ ರಾಜ್ಯಗಳ ಪೊಲೀಸರ ನಡುವಿನ ಪರಸ್ಪರ ಸಹಕಾರ ಸಂಪರ್ಕವು ಒಂದು ಪ್ರಮುಖ ಅಂಶವಾಗಿದೆ ಎಂದು ಕೂಡ ಪ್ರಧಾನಿ ಹೇಳಿದರು.

ಇಂದು ಕಾನೂನು ಸುವ್ಯವಸ್ಥೆ ಒಂದು ರಾಜ್ಯಕ್ಕೆ ಸೀಮಿತವಾಗಿಲ್ಲ. ಅಪರಾಧ ಅಂತರಾಜ್ಯ, ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿದೆ. ತಂತ್ರಜ್ಞಾನದ ನೆರವಿನಿಂದ ಅಪರಾಧ ಮಾಡುವ ಪ್ರಮಾಣ ಸಂಖ್ಯೆ ಹೆಚ್ಚಾಗುತ್ತಿದೆ, ಜೊತೆಗೆ ಅದರ ಸ್ವರೂಪ ಕೂಡ ಬದಲಾಗುತ್ತಿದೆ. ಗಡಿಯಿಂದಾಚೆಗೆ ಕ್ರಿಮಿನಲ್ ಗಳು ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅದು ಸೈಬರ್ ಕ್ರೈಂ ಆಗಿರಬಹುದು ಅಥವಾ ಡ್ರೋನ್ ತಂತ್ರಜ್ಞಾನ ಬಳಸುವ ವಿಷಯದಲ್ಲಿಯಾಗಿರಬಹುದು. ಸ್ಮಗ್ಲರ್ ಗಳು ಶಸ್ತ್ರಾಸ್ತ್ರಗಳನ್ನು ಬಳಸುವುದು ಅಥವಾ ಡ್ರಗ್ ಪೂರೈಕೆ ವಿಚಾರದಲ್ಲಿ ಹೊಸ ತಂತ್ರಜ್ಞಾನಗಳು ಕೆಲಸ ಮಾಡುತ್ತಿವೆ ಎಂದರು.

ಸರ್ಕಾರ ಪೊಲೀಸ್ ತಂತ್ರಜ್ಞಾನ ಮಿಷನ್ ಆರಂಭಿಸಿದ್ದು ತಂತ್ರಜ್ಞಾನ ಆಧಾರಿತ ಸುಧಾರಣೆಗಳು ಮತ್ತು ಪ್ರಕ್ರಿಯೆಗಳ ಮೂಲಕ ಪೊಲೀಸ್ ಪಡೆಯನ್ನು ಬಲಪಡಿಸಲಾಗುತ್ತದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT