ವಂದೇ ಭಾರತ್ ರೈಲು 
ದೇಶ

ಜಾನುವಾರುಗೆ ಡಿಕ್ಕಿ ಹೊಡೆದ ವಂದೇ ಭಾರತ್ ರೈಲು; ಒಂದೇ ತಿಂಗಳಲ್ಲಿ ಇದು ಮೂರನೇ ಬಾರಿ!

ಮುಂಬೈ- ಗಾಂಧಿನಗರ ನಡುವೆ ಓಡಾಡುವ 'ವಂದೇ ಭಾರತ್ ಸೂಪರ್ ಪಾಸ್ಟ್ ಎಕ್ಸ್ ಪ್ರೆಸ್ ರೈಲು' ಇಂದು ಮತ್ತೆ ಜಾನುವಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ  ಸಂಚಾರದಲ್ಲಿ 20 ನಿಮಿಷ ವ್ಯತ್ಯಯವಾಯಿತು ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  

ಮುಂಬೈ: ಮುಂಬೈ- ಗಾಂಧಿನಗರ ನಡುವೆ ಓಡಾಡುವ 'ವಂದೇ ಭಾರತ್ ಸೂಪರ್ ಪಾಸ್ಟ್ ಎಕ್ಸ್ ಪ್ರೆಸ್ ರೈಲು' ಇಂದು ಮತ್ತೆ ಜಾನುವಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ  ಸಂಚಾರದಲ್ಲಿ 20 ನಿಮಿಷ ವ್ಯತ್ಯಯವಾಯಿತು ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  

ಘಟನೆಯಿಂದಾಗಿ ರೈಲ್ವಿನ ಮುಂಭಾಗದ ಪ್ಯಾನಲ್ ಗೆ ಹಾನಿಯಾಗಿದೆ. ಅದರ ಮೊದಲ ಬೋಗಿಯ ಉಪಕರಣಗಳು ಮುರಿದಿವೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. ಇದು ಈ ತಿಂಗಳಲ್ಲಿ ಸಂಭವಿಸಿದ ಮೂರನೇ ಪ್ರಕರಣವಾಗಿದೆ.  

ಬೆಳಗ್ಗೆ 8-20ರ ಸುಮಾರಿನಲ್ಲಿ ಅಟಲ್ ರೈಲ್ವೆ ನಿಲ್ದಾಣದ ಬಳಿಕ ಜಾನುವಾರ ಹಳಿ ಮೇಲೆ ಬಂದಾಗ ರೈಲು ಡಿಕ್ಕಿ ಹೊಡೆದಿದೆ. ಘಟನೆಯಿಂದಾಗಿ ರೈಲ್ವೆ ಸುಮಾರು 20 ನಿಮಿಷ ಅಲ್ಲಿಯೇ ನಿಲ್ಲಬೇಕಾಯಿತು, ನಂತರ ಸಂಚಾರವನ್ನು ಪುನರ್ ಆರಂಭಿಸಿತು. ಪ್ರಯಾಣಿಕರೆಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಪಶ್ಚಿಮ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಮಿತ್ ಠಾಕೂರ್  ತಿಳಿಸಿದ್ದಾರೆ. 

ಅಕ್ಟೋಬರ್  6 ರಂದು ಇದೇ ಮಾರ್ಗದಲ್ಲಿ ಈ ರೈಲು ಡಿಕ್ಕಿ ಹೊಡೆದು ನಾಲ್ಕು ಎಮ್ಮೆಗಳು ಸಾವನ್ನಪ್ಪಿದ್ದವು. ಅಕ್ಟೋಬರ್ 7 ರಂದು ಗುಜರಾತ್ ನ ಆನಂದ್ ಬಳಿ ಹಸುವೊಂದಕ್ಕೆ ವಂದೇ ಭಾರತ್ ಸೂಪರ್ ಪಾಸ್ಟ್ ಎಕ್ಸ್ ಪ್ರೆಸ್ ಡಿಕ್ಕಿ ಹೊಡೆದಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್, ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

ಲೆಬನಾನ್ ನಲ್ಲಿ ಇಸ್ರೇಲ್ ಆರ್ಭಟ: ಮನೆಗಳ ಮೇಲೆ ಸ್ಫೋಟಕಗಳಿಂದ ದಾಳಿ; ಹಲವು ಹಳ್ಳಿಗಳು ನಾಮಾವಶೇಷ!

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

SCROLL FOR NEXT