ದೇಶ

ನೇಮಕಾತಿ ಹಗರಣ: ಉತ್ತರಾಖಂಡ ಸರ್ಕಾರದ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ; ಬಿಜೆಪಿ ಶಾಸಕರಿಂದಲೂ ಅಸಮಾಧಾನ 

Lingaraj Badiger

ಡೆಹ್ರಾಡೂನ್: ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಉತ್ತರಾಖಂಡ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತೀವ್ರ ವಾಗ್ದಾಳಿ ನಡೆಸಿದ್ದು, ಇದು ನಿರುದ್ಯೋಗಿಗಳಿಗೆ ಮಾಡಿದ ವಂಚನೆ ಎಂದಿದ್ದಾರೆ.

ಅಲ್ಲದೆ ಆಡಳಿತ ಪಕ್ಷದ ಬಿಜೆಪಿ ಶಾಸಕ ಮಹಂತ್ ದಿಲೀಪ್ ರಾವತ್ ಅವರು ತಮ್ಮದೇ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಾರ್ವಜನಿಕ ಪ್ರತಿನಿಧಿಗಳ ನಡವಳಿಕೆಯು "ಜನರ ಸೇವೆಗಾಗಿ ಇರಬೇಕು. ಅವರನ್ನು ಲೂಟಿ ಮಾಡಬಾರದು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧಾಮಿ ಸರ್ಕಾರವು ನೇಮಕಾತಿಗಳಲ್ಲಿ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ. "ರಾಜ್ಯ ಸರ್ಕಾರವು ನಿರುದ್ಯೋಗಿಗಳ ಭಾವನೆಗಳೊಂದಿಗೆ ಆಟವಾಡುವ ಮೂಲಕ ವಂಚನೆ ಮಾಡುತ್ತಿದೆ" ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕಳವಳವನ್ನು ಹಂಚಿಕೊಂಡಿರುವ ಪ್ರಿಯಾಂಕಾ, "ಸರ್ಕಾರಿ ನೇಮಕಾತಿಗಳಲ್ಲಿ ಇಂತಹ ಅತಿರೇಕದ ಭ್ರಷ್ಟಾಚಾರವು ಉತ್ತರಾಖಂಡ, ಉತ್ತರ ಪ್ರದೇಶ ಅಥವಾ ಕೇಂದ್ರ ಸರ್ಕಾರ ದೇಶಾದ್ಯಂತ ಯುವಕರ ಭವಿಷ್ಯದ ಜೊತೆ ಆಟವಾಡುತ್ತಿದೆ ಎಂದು ಸಾಬೀತುಪಡಿಸಿದೆ. ಹಗರಣಗಳು ಅರ್ಹ ಮತ್ತು ವಿದ್ಯಾವಂತ ಯುವಕರ ಭವಿಷ್ಯವನ್ನು ಕತ್ತಲಲ್ಲಿ ಇಟ್ಟಿವೆ ಎಂದಿದ್ದಾರೆ.

SCROLL FOR NEXT