ಜಮ್ಮು-ಕಾಶ್ಮೀರ 
ದೇಶ

2023 ರ ವೇಳೆಗೆ ಭಾರತದಾದ್ಯಂತ 200 ಜಿ20 ಸಭೆಗಳು: ಜಮ್ಮು-ಕಾಶ್ಮೀರ, ಲಡಾಖ್ ನಲ್ಲಿ ಭರದ ಸಿದ್ಧತೆ

2023 ರ ವೇಳೆಗೆ ಭಾರತದಲ್ಲಿ ಜಿ20 ಸಭೆಗಳು ನಡೆಯಲಿದ್ದು, ಆತಿಥ್ಯ ವಹಿಸಲು ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಸಜ್ಜುಗೊಂಡಿವೆ. 

ನವದೆಹಲಿ: 2023 ರ ವೇಳೆಗೆ ಭಾರತದಲ್ಲಿ ಜಿ20 ಸಭೆಗಳು ನಡೆಯಲಿದ್ದು, ಆತಿಥ್ಯ ವಹಿಸಲು ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಸಜ್ಜುಗೊಂಡಿವೆ. 

ಜಿ20ಯ ಅಧ್ಯಕ್ಷತೆ ಈ ವರ್ಷದ ಡಿಸೆಂಬರ್ ನಲ್ಲಿ ಭಾರತಕ್ಕೆ ಸಿಗಲಿದ್ದು, ದೇಶಾದ್ಯಂತ 200 ಸಭೆಗಳು ಆಯೋಜನೆಗೊಳ್ಳಲಿವೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2020 ರ ಬಜೆಟ್ ನಲ್ಲಿ ಈ ಕಾರ್ಯಕ್ರಮಗಳಿಗಾಗಿ 100 ಕೋಟಿ ರೂಪಾಯಿ ಬಜೆಟ್ ಅನುದಾನ ಘೋಷಿಸಿದ್ದರು. 

ಡಿಸೆಂಬರ್ ನಿಂದ ಒಂದು ವರ್ಷಗಳ ಕಾಲ ಜಿ20ಯ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಳ್ಳಲಿದ್ದು, 200 ಸಭೆಗಳ ಪೈಕಿ ಕೆಲವು ಜಮ್ಮು-ಕಾಶ್ಮೀರ ಹಾಗೂ ಲಡಾಖ್ ನಲ್ಲಿ ನಡೆಯಲಿವೆ. ಈ ಎರಡೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಜಿ20 ಶೃಂಗ ಸಭೆ ನಡೆಸುವ ಭಾರತದ ಯೋಜನೆಯನ್ನು ನಾವು ತಿರಸ್ಕರಿಸುತ್ತೇವೆ: ಪಾಕಿಸ್ತಾನ
 
ಇದು ಉತ್ತಮ ಆರಂಭವಾಗಿದ್ದು, ಜಿ20 ಸಭೆಗಳನ್ನು ಆಯೋಜಿಸುವುದು ಹೆಮ್ಮೆಯ ಸಂಗತಿಯಾಗಿದೆ. ನಾವು ಇದಕ್ಕಾಗಿ ಸಮಿತಿಯೊಂದನ್ನು ರಚಿಸಿದ್ದು, ಅದ್ಭುತ ಕಾರ್ಯಕ್ರಮವನ್ನಾಗಿ ಮಾಡುವುದಕ್ಕೆ ಎಲ್ಲಾ ರೀತಿಯ ಶ್ರಮವನ್ನೂ ವಹಿಸುತ್ತೇವೆ ಎಂದು ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಜನರಲ್ ಮನೋಜ್ ಸಿನ್ಹಾ ಹೇಳಿದ್ದಾರೆ. 

2023 ರ ಸೆ.9-10 ರಂದು ದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯಲಿದೆ. ಈ ವರ್ಷದ ಜಿ20 ಶೃಂಗಸಭೆ ಬಾಲಿಯಲ್ಲಿ ಈ ವರ್ಷದ ನವೆಂಬರ್ ನಲ್ಲಿ ನಡೆಯಲಿದ್ದು, ಜಿ-20 ನಾಯಕರೊಂದಿಗೆ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT