ದೇಶ

ಲಂಡನ್‌ನಲ್ಲಿ ನಡೆಯುವ ರಾಣಿ ಎಲಿಜಬೆತ್ ಅಂತ್ಯಕ್ರಿಯೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ

Lingaraj Badiger

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 17 ರಿಂದ 19 ರವರೆಗೆ ಲಂಡನ್‌ಗೆ ಭೇಟಿ ನೀಡಲಿದ್ದು, ರಾಣಿ ಎಲಿಜಬೆತ್ II ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ಭಾರತ ಸರ್ಕಾರದ ಪರವಾಗಿ ಸಂತಾಪ ಸೂಚಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಬ್ರಿಟನ್ ರಾಣಿ ಎಲಿಜಬೆತ್ II ಅವರು ಸೆಪ್ಟೆಂಬರ್ 8 ರಂದು ನಿಧನರಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್ ಧನಖರ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಗಣ್ಯರು ಅವರ ಸಂತಾಪ ಸೂಚಿಸಿದ್ದಾರೆ.

ಭಾರತದ ಸಂತಾಪವನ್ನು ತಿಳಿಸಲು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಸೆಪ್ಟೆಂಬರ್ 12 ರಂದು ಇಲ್ಲಿನ ಬ್ರಿಟಿಷ್ ಹೈಕಮಿಷನ್‌ ಕಚೇರಿಗೆ ಭೇಟಿ ನೀಡಿದ್ದರು. ಭಾರತ ಕೂಡ ಭಾನುವಾರ ರಾಷ್ಟ್ರೀಯ ಶೋಕಾಚರಣೆ ಆಚರಿಸಿತು.

ಬ್ರಿಟನ್ ರಾಣಿ ಎಲಿಜಬೆತ್ II ಅವರು ಕಾಮನ್‌ವೆಲ್ತ್‌ನ ಮುಖ್ಯಸ್ಥರಾಗಿ ವಿಶ್ವದಾದ್ಯಂತ ಲಕ್ಷಾಂತರ ಜನರ ಕಲ್ಯಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

SCROLL FOR NEXT