ಆಮ್ ಆದ್ಮಿ ಪಕ್ಷ 
ದೇಶ

ಪ್ರಧಾನಿ ಮೋದಿ ಹುಟ್ಟು ಹಬ್ಬಕ್ಕೆ ವ್ಯಂಗ್ಯ ಶುಭಾಶಯ ಕೋರಿದ ಆಮ್ ಆದ್ಮಿ ಪಕ್ಷ 

ಆಮ್ ಆದ್ಮಿ ಪಕ್ಷ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬಕ್ಕೆ ವ್ಯಂಗ್ಯ ಶುಭಾಶಯ ಕೋರಿದೆ.

ನವದೆಹಲಿ: ಆಮ್ ಆದ್ಮಿ ಪಕ್ಷ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬಕ್ಕೆ ವ್ಯಂಗ್ಯ ಶುಭಾಶಯ ಕೋರಿದೆ. 

ಹುಟ್ಟು ಹಬ್ಬಕ್ಕೆ ಶುಭ ಹಾರೈಸಿರುವ ಸಂದೇಶದಲ್ಲಿ ಆಮ್ ಆದ್ಮಿ ಪಕ್ಷ ಪ್ರಧಾನಿ ಮೋದಿ ಅವರನ್ನು ನವೋದ್ಯಮಿ-ಮುಖ್ಯಸ್ಥ, ತಂತ್ರಜ್ಞಾನಕ್ಕೆ ವಿಪರೀತವಾಗಿ ಸಮರ್ಪಿಸಿಕೊಂಡಿರುವ ವ್ಯಕ್ತಿ ಹಾಗೂ ಶ್ರೇಷ್ಠ ವಿಜ್ಞಾನಿ ಎಂದು ವ್ಯಂಗ್ಯವಾಗಿ ಟ್ವಿಟರ್ ಹ್ಯಾಂಡಲ್ ನಲ್ಲಿ ಹಾಕಿರುವ ಸಂದೇಶದಲ್ಲಿ ಕೊಂಡಾಡಿದೆ.
 
ಈ ಸಂದೇಶದೊಂದಿಗೆ ಪ್ರಧಾನಿ ಮೋದಿ ಸುದ್ದಿ ವಾಹಿನಿಗಳಿಗೆ ಸಂದರ್ಶನ ನೀಡಿರುವ ಹಳೆಯ ವಿಡೀಯೋ ತುಣುಗಳಲ್ಲಿ ಕಂಡು ಬರುವ ಯಡವಟ್ಟುಗಳನ್ನು ಟ್ವೀಟ್ ಮಾಡಿ ತಿವಿದಿದೆ.

ಮೋದಿ ಸಂದರ್ಶನವೊಂದರಲ್ಲಿ ತಾವು 1987-88 ರಲ್ಲಿ ಮೊದಲ ಬಾರಿಗೆ ಡಿಜಿಟಲ್ ಕ್ಯಾಮರ ಬಳಸಿ ಅದನ್ನು ದೆಹಲಿಗೆ ಇ-ಮೇಲ್ ಮೂಲಕ ಕಳಿಸಿದ್ದೆ. ಇ-ಮೇಲ್ ಆಗ ಕೆಲವೇ ಕೆಲವು ಮಂದಿಯ ಬಳಿ ಇತ್ತು ಎಂದು ಹೇಳಿದ್ದರು. ಆಮ್ ಆದ್ಮಿ ಪಕ್ಷದ ಟ್ವೀಟ್ ಗಳಿಗೆ ಬಿಜೆಪಿ ತಕ್ಷಣವೇ ಪ್ರತಿಕ್ರಿಯೆ ನೀಡಲಿಲ್ಲವಾದರೂ ಟ್ವಿಟರ್ ಬಳಕೆದಾರರು ತೀಕ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!