ಎನ್ಐಎ 
ದೇಶ

ಆಂಧ್ರಪ್ರದೇಶ, ತೆಲಂಗಾಣ ಪಿಎಫ್‌ಐ ಕಚೇರಿಗಳ ಮೇಲೆ ಭಯೋತ್ಪಾದನಾ ನಿಗ್ರಹ ದಳ ದಾಳಿ, ತೀವ್ರ ಶೋಧ

ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡ ಆರೋಪದ ಮೇರೆಗೆ ಆಂಧ್ರಪ್ರದೇಶ, ತೆಲಂಗಾಣದ ಸುಮಾರು 4 ಜಿಲ್ಲೆಗಳ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಚೇರಿಗಳ ಮೇಲೆ ಭಯೋತ್ಪಾದನಾ ನಿಗ್ರಹ ದಳ ದಾಳಿ ನಡೆಸಿದ್ದು, ತೀವ್ರ ಶೋಧ ನಡೆಸಿದೆ.

ಅಮರಾವತಿ: ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡ ಆರೋಪದ ಮೇರೆಗೆ ಆಂಧ್ರಪ್ರದೇಶ, ತೆಲಂಗಾಣದ ಸುಮಾರು 4 ಜಿಲ್ಲೆಗಳ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಚೇರಿಗಳ ಮೇಲೆ ಭಯೋತ್ಪಾದನಾ ನಿಗ್ರಹ ದಳ ದಾಳಿ ನಡೆಸಿದ್ದು, ತೀವ್ರ ಶೋಧ ನಡೆಸಿದೆ.

ಮುಸ್ಲಿಂ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ‘ದೇಶ ವಿರೋಧಿ ಚಟುವಟಿಕೆಗಳಲ್ಲಿ’ ತೊಡಗಿದೆ ಎಂಬ ಆರೋಪದ ಮೇಲೆ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯ ಭಯೋತ್ಪಾದನಾ ನಿಗ್ರಹ ದಳ ಇಂದು ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ. ಆಂಧ್ರಪ್ರದೇಶದ ಕರ್ನೂಲ್, ನೆಲ್ಲೂರು ಮತ್ತು ನಂದ್ಯಾಲ್ ಮತ್ತು ತೆಲಂಗಾಣದ ನಿಜಾಮಾಬಾದ್‌ನಾದ್ಯಂತ ದಾಳಿ ನಡೆಸಿದ್ದು, ವಿವಿಧ ಪ್ರಕರಣದ ಆರೋಪಿಗಳು ಮತ್ತು ಶಂಕಿತರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದೆ.

ಕಳೆದ ತಿಂಗಳು, ಎನ್‌ಐಎ ಹೈದರಾಬಾದ್‌ನಲ್ಲಿ 27 ಜನರ ವಿರುದ್ಧ “ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಲು” ಸಂಚು ರೂಪಿಸಿದ ಪ್ರಕರಣವನ್ನು ದಾಖಲಿಸಿತ್ತು. ಅಬ್ದುಲ್ ಖಾದರ್ ಮತ್ತು ಇತರ 26 ಮಂದಿ ವಿರುದ್ಧ ನಿಜಾಮಾಬಾದ್‌ನ ಆಟೋ ನಗರದಲ್ಲಿರುವ ಖಾದರ್ ಅವರ ಮನೆಯಲ್ಲಿ ‘ದೇಶ ವಿರೋಧಿ ಚಟುವಟಿಕೆ’ ನಡೆಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

ಮೂಲಗಳ ಪ್ರಕಾರ ಅಬ್ದುಲ್ ಖಾದರ್ ಅವರು ಪಿಎಫ್‌ಐ ಸದಸ್ಯರಿಗೆ ಅವರ ಸಭೆ ಮತ್ತು ತರಬೇತಿಗಾಗಿ 6 ಲಕ್ಷ ರೂ ನೀಡಿದ್ದಲ್ಲದೇ ಬದಲಾಗಿ ತಮ್ಮ ಮನೆಯ ಛಾವಣಿಯ ಮೇಲೆ ಹೆಚ್ಚುವರಿ ಭಾಗವನ್ನು ನಿರ್ಮಿಸಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. "ಕ್ರಿಮಿನಲ್ ಪಿತೂರಿಯನ್ನು ಅನುಸರಿಸಿ, ಅವರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸದಸ್ಯರನ್ನು ನೇಮಿಸಿಕೊಂಡರು, ಭಯೋತ್ಪಾದಕ ಕೃತ್ಯಗಳನ್ನು ಎಸಗಲು ತರಬೇತಿ ನೀಡಲು ಶಿಬಿರಗಳನ್ನು ಆಯೋಜಿಸಿದರು. ಅವರು ಕಾನೂನುಬಾಹಿರ ಸಭೆಯನ್ನು ನಡೆಸಿದ್ದಾರೆ. ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿ ತರಬೇತಿ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಅಡ್ಡಿಪಡಿಸುವ ಚಟುವಟಿಕೆಗಳ ಕಾಯ್ದೆಯಡಿಯಲ್ಲಿ ಅವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಪಿಎಫ್‌ಐ ಸದಸ್ಯರು ಕರಾಟೆ ತರಗತಿಗಳ ಹೆಸರಿನಲ್ಲಿ ಯುವಕರಿಗೆ ತರಬೇತಿ ಮತ್ತು ದೈಹಿಕ ವ್ಯಾಯಾಮಗಳನ್ನು ಪ್ರಾರಂಭಿಸಿದ್ದು, ಅವರ ದ್ವೇಷಪೂರಿತ ಭಾಷಣಗಳ ಮೂಲಕ ನಿರ್ದಿಷ್ಟ ಸಮುದಾಯದ ವಿರುದ್ಧ ಅವರನ್ನು ಪ್ರಚೋದಿಸುತ್ತಿದ್ದರು ಎಂದು ಎಫ್‌ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಾಕಿಸ್ತಾನದಲ್ಲಿ ಮುಂದುವರಿದ ರಕ್ತಪಾತ: ಚಲಿಸುತ್ತಿದ್ದ ರೈಲಿನಲ್ಲಿ ಆತ್ಮಾಹುತಿ ಬಾಂಬ್ ದಾಳಿ; 24 ಪ್ರಯಾಣಿಕರ ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

ಎಬೋಲಾ ಭೀತಿ: ಡಿಆರ್‌ಸಿ, ಉಗಾಂಡಾ, ದಕ್ಷಿಣ ಸುಡಾನ್‌ಗೆ ಅನಗತ್ಯ ಪ್ರಯಾಣ ಬೇಡ: ಭಾರತೀಯರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ

ಅಮೆರಿಕ-ಇರಾನ್ ಮಾತುಕತೆಯಲ್ಲಿ ಮಹತ್ವದ ಪ್ರಗತಿ: ಶಾಂತಿ ಒಪ್ಪಂದ ಅಂತಿಮ ಹಂತದಲ್ಲಿದೆ ಎಂದ ಡೊನಾಲ್ಟ್ ಟ್ರಂಪ್, ಹಾರ್ಮುಜ್ ಜಲಸಂಧಿ ಪುನರಾರಂಭ ನಿರೀಕ್ಷೆ

ಅಮೆರಿಕ ಶ್ವೇತಭವನ ಬಳಿ ಮತ್ತೆ ಗುಂಡಿನ ದಾಳಿ: ಪ್ರತಿದಾಳಿಗೆ ಬಂದೂಕುಧಾರಿ ಸಾವು-Video

ಮಧ್ಯಪ್ರಾಚ್ಯ ಸಂಘರ್ಷ: ತುರ್ತು ಸಭೆ ಕರೆದ ಡೊನಾಲ್ಡ್ ಟ್ರಂಪ್; ವಾಷಿಂಗ್ಟನ್‌ಗೆ ಜೆಡಿ ವ್ಯಾನ್ಸ್ ದಿಢೀರ್ ವಾಪಸ್ಸು, ಕುತೂಹಲ ಮೂಡಿಸಿದ ಬೆಳವಣಿಗೆ..!

SCROLL FOR NEXT