ದೇಶ

ವಿಚಾರಣೆಗಾಗಿ ಮತ್ತೊಮ್ಮೆ ಜಾಕ್ವೆಲಿನ್ ಫೆರ್ನಾಂಡಿಸ್ ಗೆ ದೆಹಲಿ ಪೊಲೀಸರಿಂದ ಸಮನ್ಸ್

Srinivas Rao BV

ದೆಹಲಿ: ಬಾಲಿವುಡ್ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಗೆ ದೆಹಲಿ ಪೊಲೀಸರು ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದಾರೆ.

ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ ಈ ಸಮನ್ಸ್ ಜಾರಿ ಮಾಡಿದ್ದು, ಕಾನ್ ಮಾನ್ ಸುಖೇಶ್ ಚಂದ್ರಶೇಖರ್ ಗೆ ಸಂಬಂಧಿಸಿದ ಸುಲಿಗೆ ಪ್ರಕರಣದಲ್ಲಿ ಜಾಕ್ವಲಿನ್ ಅವರು ವಿಚಾರಣೆ ಎದುರಿಸಬೇಕಿದೆ. 

ಇದು ಎರಡನೇ ಬಾರಿಗೆ ಜಾಕ್ವಲಿನ್ ಎದುರಿಸಲಿರುವ ವಿಚಾರಣೆಯಾಗಿರಲಿದೆ. ಸೋಮವಾರ ಬೆಳಿಗ್ಗೆ 11 ಗಂಟೆಗೆ ಜಾಕ್ವಲಿನ್ ಫರ್ನಾಂಡೀಸ್ ಅವರು ವಿಚಾರಣೆಗೆ ಹಾಜರಾಗಬೇಕಿದೆ. 

SCROLL FOR NEXT