ದೇಶ

ಇಂಡಿಗೋ ವಿಮಾನದಲ್ಲಿ ತೆಲುಗು ಭಾಷಿಕ ಮಹಿಳೆಗೆ ಅವಮಾನ; ವ್ಯಾಪಕ ಆಕ್ರೋಶ

Lingaraj Badiger

ಬೆಂಗಳೂರು: ತೆಲುಗು ಭಾಷಿಕರೊಬ್ಬರಿಗೆ  ಹಿಂದಿ ಅಥವಾ ಇಂಗ್ಲಿಷ್ ಬರುವುದಿಲ್ಲವೆಂಬ ಕಾರಣಕ್ಕೆ ಅವಮಾನ ಮಾಡಿದ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಸಂಬಂಧ ಅದೇ ವಿಮಾನದಲ್ಲಿ ಪಯಣಿಸುತ್ತಿದ್ದ ದೇವಸ್ಮಿತ ಚಕ್ರವರ್ತಿ ಅವರು ಚಿತ್ರದೊಂದಿಗೆ ಟ್ವೀಟ್ ಮಾಡಿದ್ದಾರೆ.

ಇಂಡಿಗೋ 6E 7297. ವಿಜಯವಾಡ (AP)ದಿಂದ ಹೈದರಾಬಾದ್ (ತೆಲಂಗಾಣ)ಕ್ಕೆ ಸೆಪ್ಟೆಂಬರ್ 16, 2022 ರಂದು  ಮೂಲತಃ 2A(XL ಸೀಟ್, ನಿರ್ಗಮನ ಸಾಲು) ನಲ್ಲಿ ಕುಳಿತಿದ್ದ ಹಸಿರು ಬಣ್ಣದ ಸೀರೆ ಧರಿಸಿರುವ  ಮಹಿಳೆಗೆ 3C ಆಸನಕ್ಕೆ ಸ್ಥಳಾಂತರ ಆಗುವಂತೆ ಬಲವಂತಪಡಿಸಲಾಯಿತು. ಏಕೆಂದರೆ ಆಕೆಗೆ ಇಂಗ್ಲಿಷ್/ಹಿಂದಿ ಬರುತ್ತಿರಲಿಲ್ಲ. ತೆಲುಗು ಮಾತ್ರ ಅರ್ಥವಾಗುತ್ತಿತ್ತು ಕಾರಣ ಕೇಳಿದಾಗ ಇದು ಭದ್ರತೆಯ ಸಮಸ್ಯೆ ಎಂದು ವಿಮಾನದ ನಿರ್ವಾಹಕರು ಹೇಳಿದರು ಎಂದು ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಆಂಧ್ರ ಪ್ರದೇಶದಿಂದ ತೆಲಂಗಾಣಕ್ಕೆ ಹೋಗುವ ವಿಮಾನದಲ್ಲಿ ತೆಲುಗಿನಲ್ಲಿ ಯಾವುದೇ ಸೂಚನೆಗಳನ್ನು ಕೊಡುವುದಿಲ್ಲ, ವಿಮಾನ ನಿರ್ವಾಹಕರು ಪ್ರಯಾಣಿಕರಿಗೆ ಇಂಗ್ಲಿಷ್/ಹಿಂದಿ ಅರ್ಥವಾಗದಿರುವುದು ಸುರಕ್ಷತೆಯ ಸಮಸ್ಯೆ ಎಂದು ಹೇಳಿದರು. ಅತೃಪ್ತಿ ಇದ್ದರೆ, ನಾವು  ದೂರು ನೀಡಬೇಕು. ಸ್ಥಳೀಯ ಭಾಷಿಕರನ್ನು ಸಿಬ್ಬಂದಿ  ಘನತೆಯಿಂದ ನಡೆಸಿಕೊಳ್ಳುತ್ತಿಲ್ಲ. ಹಿಂದಿಯೇತರರನ್ನು ಅವರ ರಾಜ್ಯದಲ್ಲಿಯೇ ಎರಡನೇ ದರ್ಜೆಯ ಪ್ರಜೆಗಳಂತೆ ಪರಿಗಣಿಸಲಾಗಿದೆ ಎಂದು ದೇವಸ್ಮಿತಾ ಚಕ್ರವರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಟ್ವೀಟ್ ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ನಿಜ. ರಾಜ್ಯದ ಅಧಿಕೃತ ಭಾಷೆ ವಿಮಾನಗಳಲ್ಲಿ ಕಡ್ಡಾಯವಾಗಿರಬೇಕು. ಈ ಹಿಂದೆ ಇದರ ಬಗ್ಗೆ ಧ್ವನಿ ಎತ್ತಲಾಗಿತ್ತು. ವಿಮಾನಯಾನ ನಿಯಂತ್ರಕರು ಈ ಸಂಬಂಧ ಸೂಚನೆ ನೀಡಿದ್ದರು. ಅದನ್ನು ವಿಮಾನಯಾನ ಕಂಪನಿಗಳು ಅನುಸರಿಸುತ್ತಿಲ್ಲ ಎಂದು ಓರ್ವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆಗೆ ತೆಲಂಗಾಣ ಸಚಿವ ಕೆಟಿಆರ್ ಅವರು ಪ್ರತಿಕ್ರಿಯಿಸಿದ್ದಾರೆ. ಇಂಡಿಗೋ ಸಂಸ್ಥೆಯವರೇ ಸ್ಥಳೀಯ ಭಾಷೆಗಳನ್ನು ಗೌರವಿಸಲು ಪ್ರಾರಂಭಿಸಿ ಎಂದು ನಾನು ನಿಮ್ಮನ್ನು ವಿನಂತಿಸುತ್ತೇನೆ. ಪ್ರಾದೇಶಿಕ ಮಾರ್ಗಗಳಲ್ಲಿ ತೆಲುಗು, ತಮಿಳು, ಕನ್ನಡ ಮುಂತಾದ ಸ್ಥಳೀಯ ಭಾಷೆ ಮಾತನಾಡಬಲ್ಲ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ.

SCROLL FOR NEXT