ಸಾಂದರ್ಭಿಕ ಚಿತ್ರ 
ದೇಶ

ವಿದ್ಯಾಭ್ಯಾಸ ನಿರ್ಲಕ್ಷಿಸಿದ ಸಹೋದರನನ್ನು ಹತ್ಯೆ ಮಾಡಿದ ಒಡಿಶಾ ಎಂಬಿಎ ಪದವೀಧರ!

ವಿದ್ಯಾಭ್ಯಾಸದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾನೆ ಎಂದು ಹಿರಿಯ ಸಹೋದರ ತನ್ನ ಕಿರಿಯ ಸಹೋದರನನ್ನು ಥಳಿಸಿದ್ದು, ಥಳಿತಕ್ಕೊಳಗಾದ 21 ವರ್ಷದ ಯುವಕ ಸಾವನ್ನಪ್ಪಿದ್ದಾನೆ! 

ಭುವನೇಶ್ವರ್: ವಿದ್ಯಾಭ್ಯಾಸದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾನೆ ಎಂದು ಹಿರಿಯ ಸಹೋದರ ತನ್ನ ಕಿರಿಯ ಸಹೋದರನನ್ನು ಥಳಿಸಿದ್ದು, ಥಳಿತಕ್ಕೊಳಗಾದ 21 ವರ್ಷದ ಯುವಕ ಸಾವನ್ನಪ್ಪಿದ್ದಾನೆ! 

ಈ ಘಟನೆ ಒಡಿಶಾದಲ್ಲಿ ನಡೆದಿದ್ದು, ರಾಜ್ ಮೋಹನ್ ಸೇನಾಪತಿ ಮೃತ ಯುವಕನಾಗಿದ್ದು, ಆತ ಬಿ.ಎಡ್ ವ್ಯಾಸಂಗ ಮಾಡುತ್ತಿದ್ದ. ಈ ವ್ಯಕ್ತಿ ಬಾರಮುಂಡದ ಖಾಸಗಿ ಹಾಸ್ಟೆಲ್ ನಲ್ಲಿ ಆತನ ಸ್ನೇಹಿತನೊಂದಿಗೆ ಇದ್ದರೆ, ಆತನ ಹಿರಿಯ ಸಹೋದರ ಎಂಬಿಎ ಪದವೀಧರ ಬಿಸ್ವ ಮೋಹನ್ ಸೇನಾಪತಿ (24) ನಾಯಪಲ್ಲಿಯ ನುಸಾಹಿ ಪ್ರದೇಶದಲ್ಲಿ ವಾಸಿಸುತ್ತಿದ್ದ ಎಂದು ತಿಳಿದುಬಂದಿದೆ. 

ಪೊಲೀಸ್ ಮೂಲಗಳ ಪ್ರಕಾರ ರಾಜ್ ಮೋಹನ್ ವಿದ್ಯಾಭ್ಯಾಸದಲ್ಲಿ ನಿರ್ಲಕ್ಷ್ಯ ತೊರುತ್ತಿದ್ದ, ಆತನ ಸಹೋದರ ಬಿಸ್ವ ಮೋಹನ್ ತಮ್ಮನನ್ನು ತಾನಿರುವ ಪ್ರದೇಶಕ್ಕೆ ಕರೆಸಿಕೊಂಡಿದ್ದಾರೆ. ಆ ಬಳಿಕ ತಮ್ಮನಿಗೆ ಥಳಿಸಿ ಅಲುಮಿನಿಯಮ್ ದೊಣ್ಣೆಯಿಂದ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡ ರಾಜ್ ಮೋಹನ್ ತನ್ನ ಸ್ನೇಹಿತರಿಗೆ ಕರೆ ಮಾಡಿ, ಅವರು ಗಾಯಾಳುವನ್ನು ಹಾಸ್ಟೆಲ್ ಗೆ ಕರೆದೊಯ್ದಿದ್ದಾರೆ. ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಚಿಕಿತ್ಸೆ ವೇಳೆಯಲ್ಲೇ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ವಿಡಿಯೋ ಅಪ್ ಲೋಡ್; ಸ್ನೇಹಿತರ ಜೊತೆ ಸೇರಿ ವೈದ್ಯನ ಕೊಲೆ ಮಾಡಿದ ಪ್ರಿಯತಮೆ!
 
ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ತನಿಖೆ ವೇಳೆ ಪೊಲೀಸರು ಮೃತ ವ್ಯಕ್ತಿಯ ತಲೆ ಮೇಲೆ ಗಾಯದ ಕಲೆಗಳಿದ್ದದ್ದನ್ನು ಕಂಡಿದ್ದಾರೆ. 

ಆರೋಪಿಯನ್ನು ಬಂಧಿಸಲಾಗಿದ್ದು ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ನಯಪಲ್ಲಿ ಇನ್ಸ್ಪೆಕ್ಟರ್ ಬಿಸ್ವರಂಜನ್ ಸಾಹೂ ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ