ದೇಶ

ಸೋನಿಯಾ ಗಾಂಧಿ ಭೇಟಿ ಮಾಡಲಿರುವ ಲಾಲೂ-ನಿತೀಶ್: ರಾಷ್ಟ್ರಮಟ್ಟದಲ್ಲಿ ಮಹಾ ಮೈತ್ರಿ ಕೂಟದ ಬಗ್ಗೆ ಬಿಸಿ ಬಿಸಿ ಚರ್ಚೆ!

Shilpa D

ಪಾಟ್ನಾ: ಬಿಹಾರದ ಮಹಾ ಘಟಬಂಧನದ ನಾಯಕರಾಗಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಬರುವ ಭಾನುವಾರ ಸಂಜೆ ಭೇಟಿ ಮಾಡಲಿದ್ದಾರೆ.

ಆರು ವರ್ಷಗಳ ಬಳಿಕ ಅವರ ಮೊದಲ ಭೇಟಿಯಾಗಿದೆ. ನಿತೀಶ್ ಕುಮಾರ್ ಮತ್ತು ಸೋನಿಯಾ ಗಾಂಧಿ ಅವರು 2015ರ ಬಿಹಾರ ಚುನಾವಣೆಗೂ ಮುನ್ನ ನಡೆದ ಇಫ್ತಾರ್ ಕೂಟವೊಂದರಲ್ಲಿ ಕೊನೆ ಸಲ ಭೇಟಿಯಾಗಿದ್ದರು. ಆಗ ಬಿಜೆಪಿಯೇತರ ಪಕ್ಷಗಳ ಜತೆ ಸೇರಿಕೊಂಡು ನಿತೀಶ್ ಕುಮಾರ್ ಮಹಾಘಟಬಂಧನ ರಚಿಸಿದ್ದರು.

2024ರ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿಯೇತರ ವಿರೋಧ ಪಕ್ಷಗಳನ್ನು ಒಟ್ಟುಗೂಡಿಸುವ ಪ್ರಯತ್ನ ನಡೆಸಿರುವ ನಿತೀಶ್ ಕುಮಾರ್, ಈ ಮಹಾ ಮೈತ್ರಿಕೂಟದ ಸಾಹಸಕ್ಕೆ ಕಾಂಗ್ರೆಸ್ ಬೆಂಬಲ ಪಡೆಯುವ ಉದ್ದೇಶವೇ ಈ ಭೇಟಿಯ ಉದ್ದೇಶ ಎನ್ನಲಾಗಿದೆ.

ಆರು ವರ್ಷಗಳ ಬಳಿಕ ಅವರ ಮೊದಲ ಭೇಟಿಯಾಗಿದೆ. ಈ ಸಭೆಗೆ ಭಾರತ್​ ಜೋಡೋ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಕೂಡ ಹಾಜರಾಗಲಿದ್ದಾರೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ನಾಯಕರ ಭೇಟಿ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಸಂದರ್ಭದಲ್ಲಿ ಕೆಲವು ಗಂಭೀರ ವಿಷಯಗಳನ್ನು ಚರ್ಚೆ ಮಾಡುವ ಸಾಧ್ಯತೆಗಳು ಇರುವುದಾಗಿ ತಿಳಿದುಬಂದಿದೆ.

ಇದೊಂದು ಸೌಜನ್ಯದ ಭೇಟಿ ಎಂದು ಮೂಲಗಳು ತಿಳಿಸಿವೆ. ಆದರೆ ಮಹಾ ಮೈತ್ರಿಕೂಟವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವುದು ಸೇರಿದಂತೆ ಕೆಲವು ಗಂಭೀರ ವಿಚಾರಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

SCROLL FOR NEXT