ಎನ್ ಐಎ ದಾಳಿ ವಿರೋಧಿಸಿ ನಡೆದ ಪ್ರತಿಭಟನೆ ಚಿತ್ರ 
ದೇಶ

ಎನ್ ಐಎ ದಾಳಿ ವಿರೋಧಿಸಿ ಪ್ರತಿಭಟನೆ: ಪುಣೆಯಲ್ಲಿ 60 ಜನರ ವಿರುದ್ಧ ದೂರು ದಾಖಲು 

ದೇಶಾದ್ಯಂತ ಪಾಪ್ಯುಲರ್ ಫ್ರಾಂಟ್ ಆಫ್ ಇಂಡಿಯಾ ಇಸ್ಲಾಮಿಕ್ ಸಂಘಟನೆಯ ಮುಖಂಡರು, ಪದಾಧಿಕಾರಿಗಳ ನಿವಾಸ ಮತ್ತು ಕಚೇರಿಗಳ ಮೇಲೆ ನಡೆದ ರಾಷ್ಟ್ರೀಯ ತನಿಖಾ ದಳ ದಾಳಿ ವಿರೋಧಿಸಿ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ ಕಾರಣಕ್ಕಾಗಿ ಪುಣೆಯಲ್ಲಿ 60 ಜನರ ನಿರುದ್ಧ ದೂರು ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಪುಣೆ: ದೇಶಾದ್ಯಂತ ಪಾಪ್ಯುಲರ್ ಫ್ರಾಂಟ್ ಆಫ್ ಇಂಡಿಯಾ ಇಸ್ಲಾಮಿಕ್ ಸಂಘಟನೆಯ ಮುಖಂಡರು, ಪದಾಧಿಕಾರಿಗಳ ನಿವಾಸ ಮತ್ತು ಕಚೇರಿಗಳ ಮೇಲೆ ನಡೆದ ರಾಷ್ಟ್ರೀಯ ತನಿಖಾ ದಳ ದಾಳಿ ವಿರೋಧಿಸಿ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ ಕಾರಣಕ್ಕಾಗಿ ಪುಣೆಯಲ್ಲಿ 60 ಜನರ ನಿರುದ್ಧ ದೂರು ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಪುಣೆ ಜಿಲ್ಲಾಧಿಕಾರಿ ಕಚೇರಿ ಹೊರಗಡೆ ನಡೆದ ಪ್ರತಿಭಟನೆ ವೇಳೆಯಲ್ಲಿ 41 ಪ್ರತಿಭಟನಾಕಾರರನ್ನು ಬಂಧಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. 

ಅನುಮತಿ ಪಡೆಯದೆ ರಸ್ತೆ ಬಂದ್ ಮಾಡಿ ಗುಂಪುಗೂಡಿ ಪ್ರತಿಭಟನೆ ನಡೆಸಿದ್ದಕ್ಕಾಗಿ ನಿನ್ನೆ ಬಂಧಿಸಲಾದ 41 ಜನರು ಸೇರಿದಂತೆ 60ಕ್ಕೂ ಹೆಚ್ಚಿನ ಜನರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಬುಂದ್ ಗಾರ್ಡನ್ ಪೊಲೀಸ್ ಠಾಣೆಯ ಹಿರಿಯ ಇನ್ಸ್ ಪೆಕ್ಟರ್ ಪ್ರತಾಪ್ ಮಾಂಕರ್ ತಿಳಿಸಿದ್ದಾರೆ.

ಯಾವುದೇ ಪ್ರತಿಭಟನೆ ನಡೆಸದಂತೆ ಆಯೋಜಕರಿಗೆ ಹಿಂದೆಯೇ ನೋಟಿಸ್ ನೀಡಲಾಗಿತ್ತು. ಆದರೆ, ಅವರು ಆದೇಶ ಪಾಲಿಸಿಲ್ಲ. ಐಪಿಸಿ ಸೆಕ್ಷನ್ 141,143,145,147,149 (ಎಲ್ಲವೂ ಕಾನೂನುಬಾಹಿರ ಜಮಾವಣೆಗೆ ಸಂಬಂಧಿಸಿವೆ) 188, 341 ಮತ್ತು ಮಹಾರಾಷ್ಟ್ರ ಪೊಲೀಸ್ ಕಾಯ್ದೆಯಡಿ ಪ್ರತಿಭಟನಾಕಾರರ ವಿರುದ್ಧ ಅಪರಾಧ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ದೇಶಾದ್ಯಂತ ಉಗ್ರರ ಚಟುವಟಿಕೆಗಳಿಗೆ ಬೆಂಬಲ ನೀಡಲಾಗುತ್ತಿದೆ ಎಂಬ ಆರೋಪದ ಮೇರೆಗೆ ಏಕಕಾಕಲದಲ್ಲಿ 15 ರಾಜ್ಯಗಳಲ್ಲಿ ಎನ್ ಐಎ ದಾಳಿಸಿ,  ಪಿಎಫ್ ಐ ಸಂಘಟನೆಯ 106 ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಧಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಂಚಿ ಪರೀಕ್ಷೆ ವಿವಾದ: ಬ್ಯಾರಿಕೇಡ್ ಮುರಿದು ವಿಧಾನಸೌಧದತ್ತ ನುಗ್ಗಿದ ವಿದ್ಯಾರ್ಥಿಗಳು! ಜಲಫಿರಂಗಿ ಬಳಸಿದ ಪೊಲೀಸರು, Video

'JDS ಪಾದಯಾತ್ರೆಯ ಬಂಡವಾಳ ಬಯಲು ಮಾಡಿದ ವಿಜಯೇಂದ್ರ': ಕಾಂಗ್ರೆಸ್​​ನಿಂದ ವಿಡಿಯೋ ಬಿಡುಗಡೆ!

D Boss ವಿರುದ್ಧ ಸ್ನೇಹಿತರೇ 'ಸಾಕ್ಷ್ಯ': ರೇಣುಕಾಸ್ವಾಮಿ ಚಡ್ಡಿ ಬಿಚ್ಚಿ ದರ್ಶನ್‌ ಹೊಡೆದಿದ್ದರು, ನೇಣು ಹಾಕೋ ಯತ್ನ- ಪ್ರದೋಷ್ ಸಲ್ಲಿಸಿದ ಅರ್ಜಿಯಲ್ಲಿ ಮತ್ತೇನಿದೆ?

TNIE Exclusive | Air India ವಿಮಾನದಲ್ಲಿ ಭಾರೀ ತಾಂತ್ರಿಕ ದೋಷ..! Phuket-Delhi ವಿಮಾನ 300 ಅಡಿ ಕುಸಿತಕ್ಕೆ Triple hydraulic systems ವೈಫಲ್ಯ ಕಾರಣ..?

GBA: ಖಾಲಿ ನಿವೇಶನ ಸ್ವಚ್ಛಗೊಳಿಸದ, ಡೆಬ್ರಿಸ್ ತೆರವುಗೊಳಿಸದ ಮಾಲೀಕರೆ ಎಚ್ಚರ! 19 ಸಾವಿರ ರೂಗಳಿಂದ 1.28 ಲಕ್ಷವರೆಗೂ ಬೀಳಲಿದೆ ದಂಡ!