ಸಾಂದರ್ಭಿಕ ಚಿತ್ರ 
ದೇಶ

ಉತ್ತರ ಪ್ರದೇಶ: ಮದುವೆಗೆ ಬಂದ ಅತಿಥಿಗಳ ಆಧಾರ್ ಕಾರ್ಡ್ ಪರಿಶೀಲನೆ, ವಿಡಿಯೋ ವೈರಲ್!

ಇತ್ತೀಚಿನ ದಿನಗಳಲ್ಲಿ ಮದುವೆಗಳಲ್ಲಿ ಪರಿಚಿತರು, ಅತಿಥಿಗಳಿಗಿಂತ ಅಪರಿಚಿತರೇ ಭಾಗವಹಿಸಿ ಊಟ ಸವಿದು ಹೋಗುವುದು ಹೆಚ್ಚಾಗುತ್ತಿದೆ. ಈ ಕಾರಣ ಮದುವೆಗೆ ಕೆಲವರು ಆಹ್ವಾನ ಪತ್ರಿಕೆ ಕಡ್ಡಾಯ ಮಾಡುತ್ತಾರೆ.

ಲಖನೌ: ಇತ್ತೀಚಿನ ದಿನಗಳಲ್ಲಿ ಮದುವೆಗಳಲ್ಲಿ ಪರಿಚಿತರು, ಅತಿಥಿಗಳಿಗಿಂತ ಅಪರಿಚಿತರೇ ಭಾಗವಹಿಸಿ ಊಟ ಸವಿದು ಹೋಗುವುದು ಹೆಚ್ಚಾಗುತ್ತಿದೆ. ಈ ಕಾರಣ ಮದುವೆಗೆ ಕೆಲವರು ಆಹ್ವಾನ ಪತ್ರಿಕೆ ಕಡ್ಡಾಯ ಮಾಡುತ್ತಾರೆ. ಉತ್ತರ ಪ್ರದೇಶದ ಮದುವೆಯೊಂದರಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಆಧಾರ್ ಕಾರ್ಡ್ ತೋರಿಸುವಂತೆ ಕೇಳಿದ್ದಾರೆ.

ಹೌದು ಇಬ್ಬರು ಸಹೋದರಿಯರ ಮದುವೆ ಒಂದೇ ಸ್ಥಳದಲ್ಲಿ ಏರ್ಪಡಿಸಲಾಗಿತ್ತು. ಈ ಮದುವೆಯೊಂದರಲ್ಲಿ ಅತಿಥಿಗಳು ಊಟದ ತಟ್ಟೆಗಳನ್ನು ತೆಗೆದುಕೊಳ್ಳುವ ಮೊದಲು ತಮ್ಮ ಆಧಾರ್ ಕಾರ್ಡ್‌ಗಳನ್ನು ತೋರಿಸುವಂತೆ ಕೇಳಿದ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಹಾಸನಪುರದಲ್ಲಿ ನಡೆದಿದೆ.

ಮದುವೆಯಲ್ಲಿ ಅತಿಥಿಗಳು ಹೊರತಾಗಿ ಅಪರಿಚಿತರು ಭಾಗವಹಿಸಿದ್ದಾರೆ ಎಂಬ ಅನುಮಾನದ ಮೇಲೆ ಊಟಕ್ಕಿಂತ ಮೊದಲು ಆಧಾರ್ ಕಾರ್ಡ್ ತೋರಿಸಲು ಹೇಳಲಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆಧಾರ್ ಕಾರ್ಡ್ ಇಲ್ಲದೇ ಬಂದಿದ್ದ ಹಲವಾರು ಮಂದಿ ಅತಿಥಿಗಳು ಇದನ್ನು ಅವಮಾನವೆಂಬಂತೆ ತಿಳಿದು ಊಟ ಮಾಡದೆ ಸ್ಥಳದಿಂದ ನಿರ್ಗಮಿಸಿದರೆ, ಆಧಾರ್ ಕಾರ್ಡ್ ಹೊಂದಿದ್ದ ಇನ್ನೂ ಹಲವರು ಊಟ ಸವಿದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್