ದೇಶ

ವಿಧಾನಸಭೆಯಲ್ಲಿ ವಿಶ್ವಾಸ ನಿರ್ಣಯ ಮಂಡಿಸಿದ ಪಂಜಾಬ್ ಸಿಎಂ ಭಗವಂತ್ ಮಾನ್

Lingaraj Badiger

ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮಂಗಳವಾರ ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸ ನಿರ್ಣಯ ಮಂಡಿಸಿದ್ದಾರೆ.

ವಿಧಾನಸಭೆ ಅಧಿವೇಶ ನಡೆಸುವ ಸಂಬಂಧ ರಾಜಭವನ ಮತ್ತು ಎಎಪಿ ಸರ್ಕಾರದ ನಡುವೆ ತೀವ್ರ ವಾಗ್ವಾದದ ನಂತರ ಸೆಪ್ಟೆಂಬರ್ 27 ರಂದು ಸದನ ಕರೆಯಲು ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ಭಾನುವಾರ ಒಪ್ಪಿಗೆ ನೀಡಿದ್ದರು.

ಅಧಿವೇಶನದ ಮೊದಲ ದಿನವೇ ಸಿಎಂ ವಿಶ್ವಾಸಮತ ಯಾಚನೆ ನಿರ್ಣಯ ಮಂಡಿಸಿದರು. 

ವಿಧಾನಸಭೆ ಸ್ಪೀಕರ್ ಕುಲತಾರ್ ಸಿಂಗ್ ಸಂಧ್ವಾನ್ ಅವರು ಸಿಎಂ ಮಾನ್ ಅವರು ವಿಶ್ವಾಸಮತ ಯಾಚನೆ ನಿರ್ಣಯ ಮಂಡಿಸುತ್ತಾರೆ ಎಂದು ಘೋಷಿಸಿದ ನಂತರ ಇಬ್ಬರು ಬಿಜೆಪಿ ಶಾಸಕರಾದ ಅಶ್ವನಿ ಶರ್ಮಾ ಮತ್ತು ಜಂಗಿ ಲಾಲ್ ಮಹಾಜನ್ ಅವರು ಸದನದಿಂದ ಹೊರ ನಡೆದರು.

SCROLL FOR NEXT