ಇಂದೋರ್ ದೇವಸ್ಥಾನದಲ್ಲಿ ಅಕ್ರಮ ಕಟ್ಟಡವನ್ನು ಕೆಡವುತ್ತಿರುವ ಅಧಿಕಾರಿಗಳು. 
ದೇಶ

ಇಂದೋರ್ ದೇಗುಲ ದುರಂತ ಪ್ರಕರಣ: ಅಧಿಕಾರಿಗಳಿಂದ ದೇವಸ್ಥಾನದ ಅಕ್ರಮ ನಿರ್ಮಾಣ ತೆರವು

ಕೆಲ ದಿನಗಳ ಹಿಂದೆಯಷ್ಟೇ ಮೆಟ್ಟಿಲುಬಾವಿ ಕುಸಿದು 36 ಜನರ ಸಾವಿಗೆ ಕಾರಣವಾಗಿದ್ದ ಬಲೇಶ್ವರ್‌ ಮಹಾದೇವ್‌ ದೇವಸ್ಥಾನದ ಅಕ್ರಮ ನಿರ್ಮಾಣವನ್ನು ಇಂದೋರ್ ನಗರ ಪಾಲಿಕೆಯು ಸೋಮವಾರ ತೆರವು ಮಾಡಿದೆ.

ಇಂದೋರ್: ಕೆಲ ದಿನಗಳ ಹಿಂದೆಯಷ್ಟೇ ಮೆಟ್ಟಿಲುಬಾವಿ ಕುಸಿದು 36 ಜನರ ಸಾವಿಗೆ ಕಾರಣವಾಗಿದ್ದ ಬಲೇಶ್ವರ್‌ ಮಹಾದೇವ್‌ ದೇವಸ್ಥಾನದ ಅಕ್ರಮ ನಿರ್ಮಾಣವನ್ನು ಇಂದೋರ್ ನಗರ ಪಾಲಿಕೆಯು ಸೋಮವಾರ ತೆರವು ಮಾಡಿದೆ.

ಇಂದು ಬೆಳಗ್ಗೆಯಿಂದಲೇ ಅಕ್ರಮ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳು ಭಾರೀ ಸಂಖ್ಯೆಯಲ್ಲಿ ನೆರೆದಿರುವುದರಿಂದ ಯಾವುದೇ ಪ್ರತಿರೋಧ ವ್ಯಕ್ತವಾಗಿಲ್ಲ.

ಸಂಭಾವ್ಯ ಪ್ರತಿರೋಧವನ್ನು ತಡೆಯಲು ನಾಲ್ಕು ಪೊಲೀಸ್ ಠಾಣೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸ್ಥಳದಲ್ಲಿ ಮಹಾನಗರ ಪಾಲಿಕೆಯ ಉಪ ಆಯುಕ್ತರು, ಜಿಲ್ಲಾಧಿಕಾರಿ ಹಾಗೂ ಇತರೆ ಅಧಿಕಾರಿಗಳು ಇದ್ದಾರೆ.

ಏತನ್ಮಧ್ಯೆ, ಸ್ಥಳದಲ್ಲಿದ್ದ ದೇವಾಲಯದ ಅರ್ಚಕರೊಬ್ಬರು ಮಾತನಾಡಿ, ದೇವಾಲಯದಲ್ಲಿದ್ದ ಮೂರ್ತಿಗಳಿಗೆ ವಿಧಿ ವಿಧಾನಗಳ ಪ್ರಕಾರ ಪ್ರಾರ್ಥನೆ ಸಲ್ಲಿಸಲಾಗಿದ್ದು, ಅವುಗಳನ್ನು ಕಂಟಫೋಡ್ ದೇವಾಲಯಕ್ಕೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಈ ದೇವಸ್ಥಾನದ ಒಳಗಡೆ ಕುಸಿತವಾಗಿ 36 ಜನರು ಅಸುನೀಗಿದ್ದರು.  ಕುಸಿದ ದೇವಾಲಯದ ಪ್ರದೇಶವು ಅಕ್ರಮ ರಚನೆಯಾಗಿದೆ ಎಂದು ಅದನ್ನು ಮೆಟ್ಟಿಲುಬಾವಿಯ ಹೊದಿಕೆಯನ್ನು ನೆಲಸಮ ಮಾಡಲು ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ ಕಳೆದ ವರ್ಷ ಸೂಚಿಸಿತ್ತು. ಆದರೆ, ದೇವಾಲಯದ ಟ್ರಸ್ಟ್ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಎಚ್ಚರಿಸಿದ ನಂತರ ಮುನಿಸಿಪಾಲಿಟಿ ಅದರಿಂದ ಹಿಂದೆ ಸರಿದಿತ್ತು.

ರಾಮ ನವಮಿಯಂದು ಜನಸಂದಣಿಯ ಭಾರದಿಂದ ಮೆಟ್ಟಿಲುಬಾವಿಯ ಮೇಲ್ಛಾವಣಿ ಒಡೆದು ಹೋಗಿತ್ತು. ಘಟನೆ ನಡೆದಾಗ ದೇವಸ್ಥಾನದಲ್ಲಿ ಹೋಮ ಹವನ ನಡೆಯುತ್ತಿತ್ತು.

ದುರಂತದ ನಂತರ, ಭಾರತೀಯ ದಂಡ ಸಂಹಿತೆ ಸೆಕ್ಷನ್ 304 (ಅಪರಾಧ ನರಹತ್ಯೆ ಕೊಲೆಯಲ್ಲ) ಅಡಿಯಲ್ಲಿ ಬಲೇಶ್ವರ್‌ ಮಹಾದೇವ್‌ ಜುಲೇಲಾಲ್ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಸೇವಾರಾಮ್ ಗಲಾನಿ ಮತ್ತು ಕಾರ್ಯದರ್ಶಿ ಮುರಳಿ ಕುಮಾರ್ ಸಬ್ನಾನಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಜುನಿ ಇಂದೋರ್ ಪೊಲೀಸ್ ಠಾಣೆಯ ಉಸ್ತುವಾರಿ ನೀರಜ್ ಮೇದಾ ತಿಳಿಸಿದ್ದಾರೆ.

ಇಬ್ಬರು ಆರೋಪಿಗಳು ಮೆಟ್ಟಿಲುಬಾವಿಯ ಮೇಲೆ ಮೇಲ್ಛಾವಣಿಯನ್ನು ಹಾಕುವ ಮೂಲಕ ಅಸುರಕ್ಷಿತ ನಿರ್ಮಾಣ ಕಾರ್ಯವನ್ನು ಮಾಡಿದ ಆರೋಪವನ್ನು ಎದುರಿಸುತ್ತಿದ್ದಾರೆ, ಅಸುರಕ್ಷಿತ ನಿರ್ಮಾಣದಿಂದಾಗಿ 36 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ ದೇವಾಲಯದ ಸಂಕೀರ್ಣದಲ್ಲಿನ ಅಕ್ರಮ ನಿರ್ಮಾಣವನ್ನು ತೆಗೆದುಹಾಕಲು ಟ್ರಸ್ಟ್‌ಗೆ ಆದೇಶ ನೀಡಲಾಗಿತ್ತು, ಆದರೆ ಟ್ರಸ್ಟ್ ಆದೇಶವನ್ನು ಪಾಲಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT