ದೇವಾಲಯದಲ್ಲಿ ನೃತ್ಯ ಮಾಡಿದ್ದ ವೀಡಿಯೋ ವೈರಲ್: ಪೊಲೀಸ್ ಅಧಿಕಾರಿ ಅಮಾನತು
ಇಡುಕ್ಕಿಯಲ್ಲಿ ಸಂತನಪಾರ ಸಬ್ ಇನ್ಸ್ ಪೆಕ್ಟರ್ ದೇವಾಲಯದಲ್ಲಿ ನೃತ್ಯ ಮಾಡಿದ್ದ ವೀಡಿಯೋ ವೈರಲ್ ಆಗಿದ್ದು ಆತನನ್ನು ಅಮಾನತು ಮಾಡಲಾಗಿದೆ.
ಇಡುಕ್ಕಿ: ಇಡುಕ್ಕಿಯಲ್ಲಿ ಸಂತನಪಾರ ಸಬ್ ಇನ್ಸ್ ಪೆಕ್ಟರ್ ದೇವಾಲಯದಲ್ಲಿ ನೃತ್ಯ ಮಾಡಿದ್ದ ವೀಡಿಯೋ ವೈರಲ್ ಆಗಿದ್ದು ಆತನನ್ನು ಅಮಾನತು ಮಾಡಲಾಗಿದೆ.
ಸಂತನಪಾರ ಪೊಲೀಸ್ ಠಾಣೆಯಲ್ಲಿ ಎಸ್ಐ ಆಗಿ ಕಾರ್ಯನಿರ್ವಹಿಸುತ್ತಿರುವ ಕೆಪಿ ಶಾಜಿ, ದೇವಾಲಯದಲ್ಲಿ ನಡೆದ ಉತ್ಸವ/ ಕಾರ್ಯಕ್ರಮವೊಂದರಲ್ಲಿ ನೃತ್ಯ ಮಾಡಿದ್ದ ವೀಡಿಯೋ ವೈರಲ್ ಆಗಿದ್ದು, ವಿಶೇಷ ತಂಡ ತನಿಖೆ ನಡೆಸಿತ್ತು. ಈ ತನಿಖಾ ವರದಿಯ ಆಧಾರದಲ್ಲಿ ಡಿಐಜಿ ಎ ಶ್ರೀನಿವಾಸ್ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಿದ್ದಾರೆ.
ಕರ್ತವ್ಯಕ್ಕೆ ನಿಯೋಜಿಸಿದ್ದಾಗ ಈ ಅಧಿಕಾರಿ ಮದ್ಯದ ಅಮಲಿನಲ್ಲಿದ್ದರು ಎಂದು ತಿಳಿದುಬಂದಿದೆ. ಭದ್ರತಾ ಸಿಬ್ಬಂದಿಯ ಅಶಿಸ್ತಿನ ನಡೆಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.