ದೇಶ

ಜಾರ್ಖಂಡ್ ಶಿಕ್ಷಣ ಸಚಿವ ಜಗರ್ನಾಥ್ ಮಹತೋ ನಿಧನ

Manjula VN

ರಾಂಚಿ: ಜಾರ್ಖಂಡ್ ಶಿಕ್ಷಣ ಸಚಿವ ಜಗರ್ನಾಥ್ ಮಹತೋ ಅವರು ಗುರುವಾರ ಚೆನ್ನೈನಲ್ಲಿ ಕೊನೆಯುಸಿರೆಳೆದಿದ್ದಾರೆ.

ಜಗರ್ನಾಥ್ ಮಹತೋ ಅವರು ನಿಧರ ಹೊಂದಿರುವುದನ್ನು ಜಾರ್ಖಾಂಡ್ ರಾಜ್ಯದ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರು ದೃಢಪಡಿಸಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ತುಂಬಲಾಗ ನಷ್ಟವಿದು. ನಮ್ಮ ಟೈಗರ್ ಜಾಗರನಾಥ್ ದಾ ಇನ್ನಿಲ್ಲ. ಮಹಾನ್ ಚಳವಳಿಗಾರ, ಹೋರಾಟಗಾರ, ಶ್ರಮಶೀಲ ಮತ್ತು ಜನಪ್ರಿಯ ನಾಯಕನನ್ನು ಇಂದು ನಮ್ಮ ರಾಜ್ಯ ಕಳೆದುಕೊಂಡಿದೆ. ಗೌರವಾನ್ವಿತ ಜಗರ್ನಾಥ್ ಮಹತೋ ಜಿ ಅವರು ಚೆನ್ನೈನಲ್ಲಿ ನಿಧನ ಹೊಂದಿದ್ದಾರೆ. ಅಗಲಿದ ಆತ್ಮಕ್ಕೆ ದೇವರು ಶಾಂತಿ ನೀಡಲಿ. ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಹೇಳಿದ್ದಾರೆ.

ಸೆಪ್ಟೆಂಬರ್ 2020ರಲ್ಲಿ ಮಹತೋ ಅವರು ಕೊರೋನಾ ಸೋಂಕಿಗೆ ಒಳಗಾಗಿದ್ದರು. ಇದರಿಂದಾಗಿ ಅವರ ಶ್ವಾಸಕೋಶ ಸಂಪೂರ್ಣವಾಗಿ ಹಾಳಾಗಿತ್ತು. ಬಳಿಕ ಅವರನ್ನು 21 ದಿನಗಳ ಕಾಲ ಲೈಫ್ ಸಪೋರ್ಟ್​ನಲ್ಲಿ ಇರಿಸಲಾಗಿತ್ತು. ಇದಾದ ಬಳಿಕ ಚೆನ್ನೈನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

ಮಾರ್ಚ್ 14 ರಂದು ಮಹತೋ ಅವರ ಅನಾರೋಗ್ಯದಲ್ಲಿ ಏರುಪೇರು ಕಂಡುಬಂದಿತ್ತು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ರಾಂಚಿಯ ಪರಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ನಂತರ ಅವರನ್ನು ವಿಮಾನದ ಮೂಲಕ ಚೆನ್ನೈ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ವಿಧಿವಶರಾಗಿದ್ದಾರೆ.

ಮಹತೋ ಅವರು 2019ರಲ್ಲಿ ದುಮ್ರಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ಅವರು ಹಲವಾರು ಬಾರಿ ಜಾರ್ಖಂಡ್ ವಿಧಾನಸಭೆ ಸದಸ್ಯರಾಗಿದ್ದರು.

SCROLL FOR NEXT