ದೇಶ

ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಲೋಕಸಭೆ 45 ಗಂಟೆ, ರಾಜ್ಯಸಭೆ 31 ಗಂಟೆಗಳ ಕಾಲ ಕಾರ್ಯನಿರ್ವಹಣೆ: ಮಾಹಿತಿ

Ramyashree GN

ನವದೆಹಲಿ: ದೈನಂದಿನ ಪ್ರತಿಭಟನೆಗಳು ಮತ್ತು ಆಗಾಗ್ಗೆ ಕಲಾಪ ಮುಂದೂಡಿಕೆಗಳು ಬಜೆಟ್ ಅಧಿವೇಶನದ ದ್ವಿತೀಯಾರ್ಧವನ್ನು ಅಡ್ಡಿಪಡಿಸುವ ಮೂಲಕ ಯೋಜಿತ ಅವಧಿಗಿಂತ ಕಡಿಮೆ ಅವಧಿಗೆ ಸಂಸತ್ತು ಕಾರ್ಯನಿರ್ವಹಿಸಿದೆ ಎಂದು ಚಿಂತಕರ ಚಾವಡಿ ಸಂಗ್ರಹಿಸಿದ ಮಾಹಿತಿ ತೋರಿಸಿದೆ.

ಅದರ ಪ್ರಕಾರ, ಲೋಕಸಭೆಯು 133.6 ಗಂಟೆಗಳ ನಿಗದಿತ ಅವಧಿಗೆ ವಿರುದ್ಧವಾಗಿ 45 ಗಂಟೆಗಳ ಕಾಲ ಕಾರ್ಯನಿರ್ವಹಿಸಿದೆ ಮತ್ತು ರಾಜ್ಯಸಭೆಯು 130 ಗಂಟೆಗಳಲ್ಲಿ ಕೇವಲ 31 ಗಂಟೆಗಳ ಕಾಲ ಮಾತ್ರ ಕೆಲಸ ಮಾಡಿದೆ.

ಇದು ಲೋಕಸಭೆಯು ಅದರ ನಿಗದಿತ ಅವಧಿಯ ಸುಮಾರು ಶೇ 34.28 ಮತ್ತು ರಾಜ್ಯಸಭೆಯು ಶೇ 24 ರಷ್ಟು ಕಾರ್ಯನಿರ್ವಹಿಸಿದೆ ಎಂದು ಪಿಆರ್‌ಎಸ್ ಶಾಸಕಾಂಗ ಸಂಶೋಧನೆ ಹೇಳಿದೆ.

ಅಧಿವೇಶನದ ಉದ್ದಕ್ಕೂ ಪ್ರಶ್ನೋತ್ತರ ಅವಧಿಯ ಪುನರಾವರ್ತಿತ ಮುಂದೂಡಿಕೆಗೆ ಉಭಯ ಸದನಗಳು ಸಾಕ್ಷಿಯಾದವು.
ಲೋಕಸಭೆಯು ಇಡೀ ಬಜೆಟ್ ಅಧಿವೇಶನದಲ್ಲಿ 4.32 ಗಂಟೆಗಳ ಕಾಲ ಸದಸ್ಯರಿಗೆ ಪ್ರಶ್ನೆಗಳನ್ನು ಕೇಳಲು ಅವಕಾಶ ನೀಡಿತು.

ಮತ್ತೊಂದೆಡೆ, ಇಡೀ ಬಜೆಟ್ ಅಧಿವೇಶನದಲ್ಲಿ ಕೇವಲ 1.85 ಗಂಟೆಗಳ ಕಾಲ ಪ್ರಶ್ನೆಗಳನ್ನು ಎದುರಿಸುವ ಮೂಲಕ ರಾಜ್ಯಸಭೆಯು ಕೆಟ್ಟ ದಾಖಲೆಯನ್ನು ಹೊಂದಿತ್ತು. 

ತಮ್ಮ ಸಮಾರೋಪ ಭಾಷಣದಲ್ಲಿ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಸದನವು 14.45 ಗಂಟೆಗಳ ಕಾಲ ಸಾಮಾನ್ಯ ಬಜೆಟ್‌ನಲ್ಲಿ ಚರ್ಚೆಗಳನ್ನು ನಡೆಸಿತು ಮತ್ತು 145 ಸಂಸದರು ಅದರಲ್ಲಿ ಭಾಗವಹಿಸಿದರು.

143 ಸಂಸದರ ಭಾಗವಹಿಸುವಿಕೆಯೊಂದಿಗೆ 13 ಗಂಟೆ 44 ನಿಮಿಷಗಳ ಕಾಲ ರಾಷ್ಟ್ರಪತಿಗಳ ಭಾಷಣಕ್ಕೆ ಕೃತಜ್ಞತಾ ನಿರ್ಣಯದ ಮೇಲಿನ ಚರ್ಚೆಗಳು ನಡೆದವು.

ಲೋಕಸಭೆಯಲ್ಲಿ, ಎಂಟು ಸರ್ಕಾರಿ ಮಸೂದೆಗಳನ್ನು ಮಂಡಿಸಲಾಯಿತು ಮತ್ತು ಆರನ್ನು ಅಂಗೀಕರಿಸಲಾಯಿತು. 29 ಪ್ರಶ್ನೆಗಳಿಗೆ ಮೌಖಿಕವಾಗಿ ಉತ್ತರಿಸಲಾಯಿತು ಎಂದು ಬಿರ್ಲಾ ಹೇಳಿದರು.

SCROLL FOR NEXT