ದೇಶ

ಆಕ್ಷೇಪಾರ್ಹ ವೆಬ್ ಸರಣಿಗಳ ನಿಷೇಧಿಸಲಾಗುವುದು: ಶಿವರಾಜ್ ಸಿಂಗ್ ಚೌಹಾಣ್ ಎಚ್ಚರಿಕೆ

Srinivasamurthy VN

ನವದೆಹಲಿ: ಆಕ್ಷೇಪಾರ್ಹ ವೆಬ್ ಸರಣಿಗಳನ್ನು ನಿಷೇಧಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಶನಿವಾರ ಹೇಳಿದ್ದಾರೆ.

ಭೋಪಾಲ್‌ನಲ್ಲಿ ಧಾರ್ಮಿಕ ಬೋಧಕ ದೇವಕಿನಂದನ್ ಠಾಕೂರ್ ಅವರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಆಕ್ಷೇಪಾರ್ಹ ವೆಬ್ ಸರಣಿಗಳನ್ನು ನಿಷೇಧಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ. ಮಧ್ಯಪ್ರದೇಶವು ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಠಾಕೂರ್ ಅವರು OTT ಪ್ಲಾಟ್‌ಫಾರ್ಮ್‌ಗಳಲ್ಲಿನ ಪ್ರದರ್ಶನಗಳು/ಸರಣಿಗಳ ವಿರುದ್ಧ ಧ್ವನಿಯೆತ್ತಿದ್ದಾರೆ, ಅವುಗಳು ಸಾಮಾಜಿಕ ಸಂಬಂಧಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದು ಶಿವರಾಜ್ ಸಿಂಗ್ ವಾದಿಸಿದ್ದಾರೆ.

ಮಾದಕ ವಸ್ತುಗಳ ನಿಯಂತ್ರಣಕ್ಕೆ ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು. ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಮದ್ಯದಂಗಡಿಗಳನ್ನು ಮುಚ್ಚಲಾಗಿದೆ, ಇದು ಈ ದಿಕ್ಕಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದು ಸಿಂಗ್ ಹೇಳಿದರು.

ಬಳಿಕ ಮಾತನಾಡಿದ ಧಾರ್ಮಿಕ ಬೋಧಕ ದೇವಕಿನಂದನ್ ಠಾಕೂರ್ ಅವರು, 'ಆಕ್ಷೇಪಾರ್ಹ ವೆಬ್ ಸರಣಿಗಳನ್ನು ನಿಷೇಧಿಸುವ ಅಗತ್ಯತೆ ಇದೆ, ಯುವ ಪೀಳಿಗೆಯು ಇಂತಹ ವಿಷಯಗಳಿಂದ ಸಂಸ್ಕೃತಿಯಿಂದ ವಿಮುಖವಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದ ಚೌಹಾಣ್, ಮಧ್ಯಪ್ರದೇಶವು ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಹೇಳಿದರು.
 

SCROLL FOR NEXT