ಸಚಿನ್ ಪೈಲಟ್, ಅಶೋಕ್ ಗೆಹ್ಲೋಟ್ 
ದೇಶ

ಸಚಿನ್ ಪೈಲಟ್ ನಿರಶನಕ್ಕೆ ಕಾಂಗ್ರೆಸ್ ಕೆಂಡಾಮಂಡಲ: ಪಕ್ಷ ವಿರೋಧಿ ಚಟುವಟಿಕೆ ವಿರುದ್ಧ ಕ್ರಮದ ಎಚ್ಚರಿಕೆ ಸಂದೇಶ ರವಾನೆ

ನಾಳೆಯಿಂದ ನಿರಶನ ಕೈಗೊಳ್ಳುತ್ತಿರುವ ರಾಜಸ್ಥಾನ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಗೆ ಕಾಂಗ್ರೆಸ್ ಎಚ್ಚರಿಕೆ ಸಂದೇಶ ರವಾನಿಸಿದೆ. 

ನವದೆಹಲಿ: ನಾಳೆಯಿಂದ ನಿರಶನ ಕೈಗೊಳ್ಳುತ್ತಿರುವ ರಾಜಸ್ಥಾನ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಗೆ ಕಾಂಗ್ರೆಸ್ ಎಚ್ಚರಿಕೆ ಸಂದೇಶ ರವಾನಿಸಿದೆ. 

ಸಚಿನ್ ಪೈಲಟ್ ನಡೆಯನ್ನು ಪಕ್ಷ ವಿರೋಧಿ ಚಟುವಟಿಕೆ ಎಂದು ಕಾಂಗ್ರೆಸ್ ಹೇಳಿದೆ. ಆದರೆ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರವೆಸಗಿದ್ದವರ ವಿರುದ್ಧ ಕ್ರಮ ಕೈಗೊಳ್ಳುವ ಬೇಡಿಕೆಯನ್ನು ಅಶೋಕ್ ಗೆಹ್ಲೋಟ್ ಸರ್ಕಾರದ  ಮುಂದಿಟ್ಟು ನಿರಶನ ನಡೆಸಲು ಮುಂದಾಗಿರುವ ಪೈಲಟ್ ತಮ್ಮ ನಿರ್ಧಾರವನ್ನು ಸಡಿಸಲು ಒಪ್ಪುತ್ತಿಲ್ಲ.

ಸರ್ಕಾರ ನಿಷ್ಕ್ರಿಯವಾಗಿದೆ ಎಂಬ ಪೈಲಟ್ ಆರೋಪವನ್ನು ಗೆಹ್ಲೋಟ್ ಸರ್ಕಾರ ನಿರಾಕರಿಸಿದ್ದು, ಕಾಂಗ್ರೆಸ್ ನಾಯಕರಲ್ಲಿನ ಎರಡು ಬಣಗಳ ನಡುವಿನ ತಿಕ್ಕಾಟ ರಾಜ್ಯದಲ್ಲಿ ಚುನಾವಣೆಗೆ ಕೆಲವೇ ತಿಂಗಳಿರುವಾಗ ಕಾಂಗ್ರೆಸ್ ಗೆ ಮುಜುಗರ ಉಂಟುಮಾಡಿದೆ. 

ನಾಳೆ ಪೈಲಟ್ ನಡೆಸುತ್ತಿರುವ ನಿರಶನ ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಪಕ್ಷವಿರೋಧಿ ಚಟುವಟಿಕೆಯಾಗಿದೆ. ತಮ್ಮದೇ ಸರ್ಕಾರದ ವಿರುದ್ಧ ಯಾವುದೇ ಸಮಸ್ಯೆ ಇದ್ದಲ್ಲಿ  ಅದನ್ನು ಸಾರ್ವಜನಿಕವಾಗಿ ಅಥವಾ ಮಾಧ್ಯಮಗಳ ಮುಂದೆ ಚರ್ಚಿಸುವ ಬದಲು ಪೈಲಟ್ ಪಕ್ಷದ ವೇದಿಕೆಗಳಲ್ಲಿ ಅದನ್ನು ಚರ್ಚಿಸಬಹುದು ಎಂದು ರಾಜಸ್ಥಾನದ ಉಸ್ತುವಾರಿ ಸುಖ್ಜಿಂದರ್ ಸಿಂಗ್ ರಾಂಧವ ಹೇಳಿದ್ದಾರೆ.

ನಾನು ಕಳೆದ 5 ತಿಂಗಳಿನಿಂದಲೂ ಎಐಸಿಸಿ ಉಸ್ತುವಾರಿಯಾಗಿದ್ದೇನೆ ಆದರೆ ಪೈಲಟ್ ಸರ್ಕಾರಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಯಾವ ವಿಷಯವನ್ನೂ ಚರ್ಚಿಸಿಲ್ಲ. ಈಗಲೂ ನಾನು ಅವರೊಂದಿಗೆ ಸಂಪರ್ಕದಲ್ಲಿದ್ದೇನೆ ಹಾಗೂ ಮಾತುಕತೆ ನಡೆಸುವಂತೆ ಸೂಚಿಸುತ್ತಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಅವರು ನಿರ್ವಿವಾದದ ಸ್ವತ್ತು" ಎಂದು ರವಾಂಧ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ