ದೇಶ

ವಿಪಕ್ಷಗಳ ಒಗ್ಗಟ್ಟಿನ ಸಲುವಾಗಿ ಅದಾನಿ ವಿರುದ್ಧ ಜೆಪಿಸಿ ತನಿಖೆಗೆ ವಿರೋಧಿಸಲ್ಲ: ಪವಾರ್

Srinivas Rao BV

ಮುಂಬೈ: ಅದಾನಿ ಸಮೂಹದ ಬಗ್ಗೆ ಎನ್ ಸಿಪಿ ನಾಯಕ ಶರದ್ ಪವಾರ್ ತೆಗೆದುಕೊಳ್ಳುತ್ತಿರುವ ನಿಲುವು ಅಚ್ಚರಿ ಮೂಡಿಸುತ್ತಿದ್ದು, ಈಗ ಶರದ್ ಪವಾರ್ ಕೇವಲ ವಿಪಕ್ಷಗಳ ಒಗ್ಗಟ್ಟಿನ ಸಲುವಾಗಿ ಅದಾನಿ ವಿರುದ್ಧದ ಜೆಪಿಸಿ ತನಿಖೆಯ ಆಗ್ರಹವನ್ನು ವಿರೋಧಿಸಲ್ಲ ಎಂದು ಹೇಳಿದ್ದಾರೆ.
 
ಅದಾನಿ ಸಮೂಹದ ವಿರುದ್ಧದ ಆರೋಪಗಳ ಬಗ್ಗೆ ಜಂಟಿ ಸದನ ಸಮಿತಿ ತನಿಖೆ ನಡೆವುದಕ್ಕೆ ಬಿಜೆಪಿ ವಿರೋಧಿ ಪಕ್ಷಗಳು ಮುಂದಿಡುತ್ತಿರುವ ಬೇಡಿಕೆಯನ್ನು ತಮ್ಮ ಪಕ್ಷ ಒಪ್ಪದೇ ಇದ್ದರೂ ವಿಪಕ್ಷಗಳ ಒಗ್ಗಟ್ಟಿನ ಕಾರಣಕ್ಕಾಗಿ ಬೇಡಿಕೆಯ ವಿರುದ್ಧ ಮಾತನಾಡುವುದಿಲ್ಲ ಎಂದು ಶರದ್ ಯಾದವ್ ಹೇಳಿದ್ದಾರೆ.

ಬಿಜೆಪಿಗೆ ಸಂಸತ್ ನಲ್ಲಿರುವ ಸಂಖ್ಯಾಬಲವನ್ನು ನೋಡಿದರೆ ಜಂಟಿ ಸದನ ಸಮಿತಿಗೆ ತನಿಖೆಗೆ ಆದೇಶಿಸಿದರೂ ಅದರ ಫಲಿತಾಂಶದ ಬಗ್ಗೆ ಶಂಕೆಗಳು ಮೂಡುತ್ತವೆ. ಜೆಪಿಸಿ ಕುರಿತು ನಮ್ಮ ಮಿತ್ರ ಪಕ್ಷಗಳ ಅಭಿಪ್ರಾಯಕ್ಕಿಂತ ನಮ್ಮ ಅಭಿಪ್ರಾಯ ಭಿನ್ನವಾಗಿದೆ. ಆದರೆ ನಾವು ನಮ್ಮ ಒಗ್ಗಟ್ಟನ್ನು ಕಾಯ್ದುಕೊಳ್ಳಬೇಕಿದೆ. ಜೆಪಿಸಿ ತನಿಖೆ ಕುರಿತು ನನ್ನ ಅಭಿಪ್ರಾಯವನ್ನು ನಾನು ತಿಳಿಸಿದ್ದೇನೆ. ಆದರೆ ನಮ್ಮ ಸಹೋದ್ಯೋಗಿಗಳು, ಜೊತೆಗಾರರು ಜೆಪಿಸಿ ಕಡ್ಡಾಯವಾಗಿ ನಡೆಯಲೇಬೇಕೆಂದು ಭಾವಿಸಿದರೆ ನಾವು ಅದನ್ನು ವಿರೋಧಿಸುವುದಿಲ್ಲ ಎಂದು ಪವಾರ್ ಹೇಳಿದ್ದಾರೆ. 

SCROLL FOR NEXT