ದೇಶ

ಬ್ಯಾಂಡ್ ಬಾಜಾ: ವರ್ಗಾವಣೆಯ ನಂತರ ಬೀಳ್ಕೊಡುಗೆ ಮೆರವಣಿಗೆ ನಡೆಸಿದ ಛತ್ತೀಸ್‌ಗಢ ಪೊಲೀಸ್‌ ಅಧಿಕಾರಿ ಅಮಾನತು

Lingaraj Badiger

ರಾಯ್‌ಪುರ: ರಾಜನಂದಗಾಂವ್‌ನ ಡೊಂಗರ್‌ಗಢ ಪೊಲೀಸ್ ಠಾಣೆಯ ಪೊಲೀಸರು ಬ್ಯಾಂಡ್-ಬಾಜಾ ಮತ್ತು ನೃತ್ಯದೊಂದಿಗೆ ಅದ್ಧೂರಿ ಬೀಳ್ಕೊಡುಗೆ ಮೆರವಣಿಗೆ ನಡೆಸಿದ ಟೌನ್ ಇನ್ಸ್‌ಪೆಕ್ಟರ್ ಸುರೇಂದ್ರ ಸ್ವರ್ಣಕರ್ ಅವರನ್ನು 'ಅನುಚಿತ ವರ್ತನೆ' ಆಧಾರದ ಮೇಲೆ ಅಮಾನತುಗೊಳಿಸಲಾಗಿದೆ.

ಸುರೇಂದ್ರ ಸ್ವರ್ಣಕರ್ ಅವರನ್ನು ರಾಜನಂದಗಾಂವ್‌ನಿಂದ ಬಿಲಾಸ್‌ಪುರ ಜಿಲ್ಲೆಗೆ ವರ್ಗಾಯಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸ್ವರ್ಣಕರ್ ಅವರನ್ನು ಅದ್ಧೂರಿ ಮೆರವಣಿಗೆ ಮೂಲಕ ಬೀಳ್ಕೊಡಲಾಗಿದೆ. ಈ ವೇಳೆ ಸ್ವರ್ಣಕರ್ ಅವರು SUV ಕಾರಿನಲ್ಲಿ, ಕಪ್ಪು ಸನ್ಗ್ಲಾಸ್ ಧರಿಸಿ, ಸನ್‌ರೂಫ್ ಮೂಲಕ 'ಸಿಂಗಮ್' ನಂತೆ ಪೋಸ್ ನೀಡಿದ್ದಾರೆ.

ಟ್ರಾಫಿಕ್ ಪೊಲೀಸರ ವಿರೋಧದ ನಡುವೆಯೂ ಸ್ವರ್ಣಕರ್ ಅವರು ಅದ್ಧೂರಿ ಮೆರವಣಿಗೆ ನಡೆಸಿದ್ದು, ಪೋಲೀಸ್ ಅಧಿಕಾರಿಯು ಜಮಾಯಿಸಿದ ಜನರತ್ತ ಕೈ ಬೀಸಿದ್ದಾರೆ. ಇನ್ನೂ ಸಮವಸ್ತ್ರದಲ್ಲಿ ಅವರ ಸಹೋದ್ಯೋಗಿಗಳು ಭಾಂಗ್ರಾ ನಾದಕ್ಕೆ ತಕ್ಕಂತೆ ನೃತ್ಯ ಮಾಡುತ್ತಾ ಅವರ ವಾಹನಕ್ಕೆ ಪೋಲೀಸ್ ಠಾಣೆಯಿಂದಲೇ ಬೆಂಗಾವಲು ನೀಡಿದ್ದಾರೆ.

ಪೊಲೀಸ್ ಅಧಿಕಾರಿಯ ಅದ್ಧೂರಿ ಬೀಳ್ಕೊಡುಗೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಿಂದ ಎಚ್ಚೆತ್ತುಕೊಂಡ ಬಿಲಾಸ್‌ಪುರ ವ್ಯಾಪ್ತಿಯ ಪೊಲೀಸ್ ಮಹಾನಿರೀಕ್ಷಕ ಬದ್ರಿ ನಾರಾಯಣ ಮೀನಾ. ಅವರು ಸ್ವರ್ಣಕರ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

SCROLL FOR NEXT