ದೇವಾಲಯದಲ್ಲಿ ನೃತ್ಯ ಮಾಡಿದ್ದ ವೀಡಿಯೋ ವೈರಲ್: ಪೊಲೀಸ್ ಅಧಿಕಾರಿ ಅಮಾನತು

ಇಡುಕ್ಕಿಯಲ್ಲಿ ಸಂತನಪಾರ ಸಬ್ ಇನ್ಸ್ ಪೆಕ್ಟರ್ ದೇವಾಲಯದಲ್ಲಿ ನೃತ್ಯ ಮಾಡಿದ್ದ ವೀಡಿಯೋ ವೈರಲ್ ಆಗಿದ್ದು ಆತನನ್ನು ಅಮಾನತು ಮಾಡಲಾಗಿದೆ. 
ಅಮಾನತು (ಸಾಂಕೇತಿಕ ಚಿತ್ರ)
ಅಮಾನತು (ಸಾಂಕೇತಿಕ ಚಿತ್ರ)
Updated on

ಇಡುಕ್ಕಿ: ಇಡುಕ್ಕಿಯಲ್ಲಿ ಸಂತನಪಾರ ಸಬ್ ಇನ್ಸ್ ಪೆಕ್ಟರ್ ದೇವಾಲಯದಲ್ಲಿ ನೃತ್ಯ ಮಾಡಿದ್ದ ವೀಡಿಯೋ ವೈರಲ್ ಆಗಿದ್ದು ಆತನನ್ನು ಅಮಾನತು ಮಾಡಲಾಗಿದೆ. 

ಸಂತನಪಾರ ಪೊಲೀಸ್ ಠಾಣೆಯಲ್ಲಿ ಎಸ್ಐ ಆಗಿ ಕಾರ್ಯನಿರ್ವಹಿಸುತ್ತಿರುವ ಕೆಪಿ ಶಾಜಿ,  ದೇವಾಲಯದಲ್ಲಿ ನಡೆದ ಉತ್ಸವ/ ಕಾರ್ಯಕ್ರಮವೊಂದರಲ್ಲಿ ನೃತ್ಯ ಮಾಡಿದ್ದ ವೀಡಿಯೋ ವೈರಲ್ ಆಗಿದ್ದು, ವಿಶೇಷ ತಂಡ ತನಿಖೆ ನಡೆಸಿತ್ತು.  ಈ ತನಿಖಾ ವರದಿಯ ಆಧಾರದಲ್ಲಿ ಡಿಐಜಿ  ಎ ಶ್ರೀನಿವಾಸ್ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಿದ್ದಾರೆ. 

ಕರ್ತವ್ಯಕ್ಕೆ ನಿಯೋಜಿಸಿದ್ದಾಗ ಈ ಅಧಿಕಾರಿ ಮದ್ಯದ ಅಮಲಿನಲ್ಲಿದ್ದರು ಎಂದು ತಿಳಿದುಬಂದಿದೆ. ಭದ್ರತಾ ಸಿಬ್ಬಂದಿಯ ಅಶಿಸ್ತಿನ ನಡೆಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com